ಬಂಟ್ವಾಳ :ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ (ರಿ )ನಂದಗೋಕುಲ,ಪುದು ನಾಣ್ಯ ಇದರ ಪುನರ್ ನಿರ್ಮಾಣ ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆಯು ಸೆ. 20ರಂದು ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯದಲ್ಲಿ ನಡೆಯಿತು.
ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಪುನರ್ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಬರ್ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಸುದೇಶ್ ಗಂಪದಕೊಡಿ ಸರ್ವಾನುಮತದಿಂದ ಆಯ್ಕೆ ಯಾದರು.
ಇತರ ಪದಾಧಿಕಾರಿಗಳ ವಿವರ :
ಗೌರವಾಧ್ಯಕ್ಷರು ಜಿ . ಜಿ ಮೋಹನ್ ದಾಸ್ ಪ್ರಭು,ಪ್ರಧಾನ ಸಂಚಾಲಕ ಉಮೇಶ್ ಸಾಲಿಯಾನ್ ಬೆಂಜನಪದವು, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಕೋಶಾಧಿಕಾರಿ ನಾಗೇಶ್ ಕಡೆಗೋಳಿ,ಸಂಚಾಲಕರು ನವೀನ್ ಚಂದ್ರ ನಾಣ್ಯ,ಸಂದೀಪ್ ನಾಣ್ಯ, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಪಿ. ವಿ.,ಜಗದೀಶ್ ಕಡೆಗೋಳಿ,ಚಂದ್ರಹಾಸ ಕಡೆಗೋಳಿ,ವಿನಯ ಕುಮಾರ್ ಕಡೆಗೋಳಿ,ಮನೋಹರ ಕಂಜತ್ತೂರು,ಯೋಗೀಶ್ ಕೋಟ್ಯಾನ್, ಹಾಗೂ ಗೌರವ ಸಲಹೆಗಾರರು ಉಪಾಧ್ಯಕ್ಷರು ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.
ಸಮಾಲೋಚನಾ ಸಭೆ :
ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ (ರಿ )ನಂದಗೋಕುಲ,ಪುದು ನಾಣ್ಯ.ಇದರ ಪುನರ್ ನಿರ್ಮಾಣ
ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆಯನ್ನು ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ಅಧ್ಯಕ್ಷ ಚಂದ್ರಶೇಖರ್ ಗಾಂಭೀರ ದೀಪ ಬೆಳಗಿಸಿ ಚಾಲನೆ ನೀಡಿದರು.
ರಾಮಚಂದ್ರ ಬಂಗೇರ, ಗಣೇಶ್ ಸುವರ್ಣ, ಸುಂದರ ಕುಲಾಲ್ ನಾಣ್ಯ,ಉಮೇಶ್ ಸಾಲಿಯಾನ್ ಬೆಂಜನಪದವು, ಉಮೇಶ್ ಶೆಟ್ಟಿ ಬರ್ಕೆ,ಬಾಸ್ಕರ ಕುಲಾಲ್, ರಾಧಾಕೃಷ್ಣ ತಂತ್ರಿ, ಎಂ. ಆರ್. ನಾಯರ್, ರಾಘವ ಪೆರ್ಲಬೈಲ್, ಜಯಶ್ರೀ ಕರ್ಕೇರ, ವಿದ್ಯಾ ಶೇಖರ್ ಕುಮ್ದೇಲ್, ಮಾಧವ ನಾಣ್ಯ, ಶಾಂತ ಡಿ ಚೌಟ, ಕಮಲ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿ, ವಿಶ್ವನಾಥ ಕುಲಾಲ್ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿ, ಸಾಯಿ ಚಾರ್ವಿ ಕಡೆಗೋಳಿ ಪ್ರಾರ್ಥಿಸಿ, ತೇವು ತಾರಾನಾಥ ಕೊಟ್ಟಾರಿ ಸಮಿತಿ ರಚನೆಯನ್ನು ನಡೆಸಿಕೊಟ್ಟರು,ಪ್ರೀತಮ್ ಎ. ಕೆ ರೊಟ್ಟಿಗುಡ್ಡೆ ಧನ್ಯವಾದವಿತ್ತು,ಜಗದೀಶ್ ಕಡೆಗೋಳಿ ನಿರೂಪಿಸಿದರು.












