Coastal Bulletin

ಬೇಸಿಗೆ ಕಾಲದಲ್ಲಿ ಕಾಡೋ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಕೂಡಾ ಒಂದು. ದೇಹದ ಉಷ್ಣತೆ ಹೆಚ್ಚಿದಾಗ ಉಂಟಾಗೋ ಈ ಸಮಸ್ಯೆಯಿಂದ ಊಟ ಬಿಡಿ ನೀರು ಕುಡಿಯಲು ಸಹ ತುಂಬಾನೇ ಕಷ್ಟವಾಗುತ್ತದೆ. ಇದಕ್ಕೆ ಕೆಲವು ಸರಳ ಮನೆಮದ್ದುಗಳಿವೆ.

ಉಪ್ಪು ನೀರು

ಉಪ್ಪು ನೀರು ಗಂಟಲು ನೋವಿಗೆ ಮಾತ್ರ ಮದ್ದಲ್ಲ ಬಾಯಿ ಹುಣ್ಣಿಗೂ ಮನೆಮದ್ದೆ. ಒಂದು ಗ್ಲಾಸ್ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ , ಬಾಯಿ ಮುಕ್ಕಳಿಸವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.

ಲೋಲೆಸರ

ಲೋಲೆಸರವನ್ನು ಬಾಯಿಯಲ್ಲಿ ಹುಣ್ಣಿರುವ ಜಾಗಕ್ಕೆ ಹಚ್ಚಬೇಕು . ಆಗ ನೋವು ಕೂಡ ಕಡಿಮೆಯಾಗುತ್ತದೆ.

ತೆಂಗಿನೆಣ್ಣೆ

ತೆಂಗಿನೆಣ್ಣೆ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನೊಳಗೊಂಡಿದೆ. ಇದು ಬಾಯಿ ಹುಣ್ಣಿಗೂ ಪರಿಣಾಮಕಾರಿ ಔಷಧ. ಹುಣ್ಣಿರೋ ಜಾಗಕ್ಕೆ ತೆಂಗಿನೆಣ್ಣೆ ಲೇಪಿಸಬೇಕು. 

ಎಳನೀರು

ದೇಹದ

ಉಷ್ಣತೆ ಹೆಚ್ಚಿದಾಗ ಬಾಯಿ ಹುಣ್ಣು ಶುರುವಾಗತ್ತದೆ. ಅದಕ್ಕೆ ದೇಹವನ್ನು ತಂಪುಗೊಳಿಸುವ ಪಾನೀಯಗಳನ್ನು ಕುಡಿಯುದು ಒಳ್ಳೆಯದು. ಮುಖ್ಯವಾಗಿ ಎಳನೀರು ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವಾಗಿದೆ. ಮೂರು- ನಾಲ್ಕು ದಿನ ಎಳನೀರು ಕುಡಿಯುದರಿಂದ ಬಾಯಿ ಹುಣ್ಣು ಶಮನಗೊಳ್ಳುತ್ತದೆ.

ಅರಿಶಿಣ

ಅರಿಶಿಣದಲ್ಲಿ ಸೋಂಕುನಿವಾರಕ ಗುಣವಿರೋದು ಎಲ್ಲರಿಗೂ ತಿಳಿದಿದೆ. ಇದು ಬಾಯಿ ಹುಣ್ಣಿನ ನೋವುನ್ನು ಕಡಿಮೆ ಮಾಡುತ್ತದೆ.ಅರಿಶಿಣಕ್ಕೆ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ, ಇದನ್ನು ಹುಣ್ಣಿರೋ ಭಾಗಕ್ಕೆ ಹಚ್ಚಬೇಕು.

Leave a Comment