Coastal Bulletin

ದ.ಕ : ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಯಾವುದೇ ದೇವಸ್ಥಾನಗಳಿಗೂ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೊರ ಜಿಲ್ಲೆಗಳಿಂದ ಭಕ್ತರು ವಾಹನಗಳಲ್ಲಿ ಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು. ಅಲ್ಲದೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿರುವುದು ಕಂಡು ಬಂದರೆ ಆಯಾ ದೇವಸ್ಥಾನಗಳ ಆಡಳಿತ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶ ಮಾಡುವ ಗಡಿಭಾಗದ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಾರ್ಮಾಡಿ, ಉಜಿರೆಯಲ್ಲೂ ಹೆಚ್ಚುವರಿ ಪೊಲೀಸರು ತಪಾಸಣೆ ನಡೆಸಲು ಆರಂಭಿಸಿದ್ದಾರೆ. 

ಇತರ ಜಿಲ್ಲೆಗಳಲ್ಲಿ ಲಾಕ್ ಡೌನ್   ಸಡಿಲಿಕೆ ಆಗಿರುವುದರಿಂದ ಕಳೆದ ಒಂದು ವಾರದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ

ಭಕ್ತರು ಬರುತ್ತಿದ್ದರು ಹೀಗಾಗಿ ಜಿಲ್ಲಾಧಿಕಾರಿಯವರು ಹೆಚ್ಚುವರಿ ಆದೇಶ ಹೊರಡಿಸಿದ್ದಾರೆ.


ಗುಂಡ್ಯ ಚೆಕ್ ಪೋಸ್ಟ್ ನಲ್ಲಿ 69 ವಾಹನಗಳನ್ನು ವಾಪಾಸು ಕಳುಹಿಸಿದ ಪೊಲೀಸರು. 

ರಾತ್ರಿ 10ರಿಂದ ಇಂದು ಬೆಳಗ್ಗಿನ ನಡುವೆ ಪೊಲೀಸರು ಗುಂಡ್ಯ ಚೆಕ್ ಪೋಸ್ಟ್ ಒಂದರಲ್ಲೇ 69 ವಾಹನಗಳನ್ನು ಅಡ್ಡಗಟ್ಟಿದ್ದು ಅಲ್ಲಿಂದಲೇ ಹಿಂದಕ್ಕೆ ಕಳುಹಿಸಿದ ಬಗ್ಗೆ ವರದಿಯಾಗಿದೆ.

Leave a Comment