Coastal Bulletin

ಮುಂಬಯಿ : ಟಿ- ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಅಬ್ದುಲ್ ರೌಫ್ ಮರ್ಚೆಂಟ್ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಸಹಾಯಕನಾದ ಅಬ್ದುಲ್ ರೌಫ್ ಮರ್ಚೆಂಟ್ ಗೆ 1997 ರ ಗುಲ್ಶನ್ ಕುಮಾರ್ ಹತ್ಯೆ ಪ್ರಕರಣದಲ್ಲಿ 2002ರಲ್ಲಿ ಜೀವಾವಧಿ

ಶಿಕ್ಷೆ ವಿಧಿಸಲಾಗಿತ್ತು. ಟಿಪ್ಸ್ ಇಂಡಸ್ಟ್ರಿಯ ಆರೋಪಿ ರಮೇಶ್ ತೌರಾನಿಯನ್ನು ಖುಲಾಸೆಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Leave a Comment