ಸಂತೋಷ್ ಕುಲಾಲ್ ನೆತ್ತರಕೆರೆ.

ಎಲ್ಲೊ ಮರದಿಂದ ಬಿದ್ದ ಎಲೆ ನೆಲಕ್ಕೆ ಬಿದ್ದು ಕಸವಾಗಿ, ಗೊಬ್ಬರವಾಗಿ ಭೂಮಿಗೆ ಸೇರಬಹುದು, ಆದರೆ ಇಲ್ಲೊಬ್ಬ ಯುವಕ ತನ್ನಲಿರುವ ಕಲಾ ಪ್ರೌಡಿಮೆಯಿಂದ,ಶ್ರದ್ದೆ, ತಾಳ್ಮೆ, ಹೊಸತನ್ನು ಕಲಿಯುವ ಅದಮ್ಯ ಆಸಕ್ತಿ,ಯಿಂದ ಅದೇ ಎಲೆಗಳಿಂದ ಸೃಜನಾತ್ಮಕ ಕಲಾಕೃತಿಗಳನ್ನು ತನ್ನ ಕೈಚಳಕದಿಂದ ರಚಿಸಿ ಜನಮನ್ನಣೆ ಗಳಿಸುತಿದ್ದಾರೆ.

ಈ ಅಪರೂಪದ ಲೀಫ್ ಆರ್ಟ್ ಕಲಾವಿದ ಶಿವ ಪ್ರಶಾಂತ್ ಆಚಾರ್ಯ ಆರ್ ಬೆಂಜನಪದವು, ತಾಳ್ಮೆ, ಕ್ರಿಯಾಶೀಲತೆ, ಸೃಜನತೆಯನ್ನು ಬಯಸುವ ಈ ಲೀಫ್ ಆರ್ಟ್ ನ್ನು,ಬಹಳ ಪರಿಪೂರ್ಣವಾಗಿ ಗ್ರಹಿಸಿ ,ಸೂಕ್ಷ್ಮತೆ,ತಾದತ್ಮತೆಯನ್ನು ತನ್ನಲ್ಲಿ ಮೈಗೂಡಿಸಿ,ಸುಂದರ ಚಿತ್ರ ವಿನ್ಯಾಸಗಳನ್ನು ವಿವಿಧ ಮರದ ಎಲೆಗಳಲ್ಲಿ ಮೂಡಿಸುತಿದ್ದಾರೆ.


ತನ್ನ ಕೈಚಳಕದಲ್ಲಿ ಸೃಜನಾತ್ಮಕವಾಗಿ ಮೂಡಿಬಂದಿರುವ ಶ್ರೀ ಕೃಷ್ಣ, ಅಯ್ಯಪ್ಪ ಸ್ವಾಮಿ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಗಣಪತಿ, ಶಿವ, ದೇವಿ, ನಿತ್ಯಾನಂದ ಸ್ವಾಮಿ, ಅಂಬೇಡ್ಕರ್, ನರೇಂದ್ರ ಮೋದಿ, ಚಾರ್ಲಿ ಚಾಪ್ಲಿನ್, ಹುಲಿ ಹೀಗೆ ಇನ್ನು ಅನೇಕ ತರಹೇವಾರಿ ಚಿತ್ರಗಳನ್ನು, ತಾಳೆ ಗರಿ, ಅಶ್ವಥ ಎಲೆ,ಹಲಸಿನ ಎಲೆ,ಹೀಗೆ ಬೇರೆ ಬೇರೆ ಮರದ ಎಲೆಗಳಲ್ಲಿ ಈ ತನಕ 200ಕ್ಕೊ ಅಧಿಕ ಮನೋಜ್ಞ ಕಲಾ ಕೃತಿಗಳನ್ನು ಚಿತ್ರಿಸಿ ನೋಡುಗರನ್ನು ಬೆರಗುಗೊಳಿಸುತ್ತಾರೆ.


ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿನಗರದ ನಿವಾಸಿಯಾಗಿರುವ ಶಿವಪ್ರಶಾಂತ ಪದವಿದರ, ವೃತಿಯಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ, ಯಾವುದೇ ಗುರುವಿನ ಸಹಾಯವಿಲ್ಲದೆ ಯೂಟ್ಯೂಬ್ ನಲ್ಲಿ ಈ ಲೀಫ್ ಆರ್ಟ್ ಬಗೆಗಿನ ಸೂಕ್ಷ್ಮತೆಗಳನ್ನು

ಗಮನಿಸಿ ನೋಡಿ ನಂತರ ತನ್ನ ಅದಮ್ಯ ಆಸಕ್ತಿಯಿಂದ ಈ ಲೀಫ್ ಆರ್ಟ್ ನ್ನು ಕಲಿತು ಕರಗತಮಾಡಿ ಪ್ರವೃತಿಯನ್ನಾಗಿಸಿದ್ದಾರೆ.

ಶಿವಪ್ರಶಾಂತರ ಪ್ರತಿಭೆ ಕೇವಲ ಲೀಫ್ ಆರ್ಟ್ ಗೆ ಸೀಮಿತಗೊಂಡಿಲ್ಲ ಬದಲಾಗಿ, ಪೇಂಟಿಂಗ್, ರಂಗೋಲಿ,ನವಧಾನ್ಯದಿಂದ ಚಿತ್ರ ಬಿಡಿಸುವುದು, ಪೆನ್ಸಿಲ್ ತ್ರೆಡ್ಗಳಲ್ಲಿ ವಿಶಿಷ್ಟ ಚಿತ್ರ,,ಮರದ ತುಂಡುಗಳಿಂದ ವಿವಿಧ ಚಿತ್ರಾಕೃತಿ ಬಿಡಿಸುವ ಮೂಲಕ ಕಲೆಯ ಹಲವು ಪ್ರಾಕರಗಳಲ್ಲಿ ಪರಿಣತಿ ಹೊಂದಿ ಸೈ ಎಸಿಕೊಂಡಿದ್ದಾರೆ.


ಕಲೆಯು ನಿಂತ ನೀರಗಬಾರದು ಎಂಬ ದೃಷ್ಟಿ ಕೋನ ದಿಂದ ತಾನು ಕಲಿತ ವಿದ್ಯೆಯನ್ನು ಎಳೆಯ ಮಕ್ಕಳಿಗೆ ಧಾರೆ ಎರೆಯುತಿರುವ ಇವರ ಈ ಗುಣವು ಇವರನ್ನು ಇನ್ನಷ್ಟು ಎತ್ತರಕೇರಿಸುದರಲ್ಲಿ ಎರಡು ಮಾತಿಲ್ಲ,ಬೇರೆ ಬೇರೆ ಕಡೆಗಳಿಂದ ಇವರು ರಚಿಸಿದ ಕಲಾಕೃತಿಗಳಿಗೆ ಬೇಡಿಕೆ ಬರುತ್ತಿರುವುದು ಇವರ ಕಲಾ ಪ್ರತಿಭೆಗೆ ಸಂದ ಗೌರವ.


ಒಟ್ಟಿನಲ್ಲಿ ಹೊಸತನ್ನು ಕಲಿಯುವ ತುಡಿತ ಹಾಗೂ ಸ್ವಪರಿಶ್ರಮದಿಂದ, ಲೀಫ್ ಆರ್ಟ್ ನಲ್ಲಿ ಹೊಸತನವನ್ನು ಸೃಷ್ಟಿಸಿ, ಜನಮೆಚ್ಚುಗೆ ಗಳಿಸುತ್ತಿರುವ ಇವರ ಭವಿಷ್ಯ ಉಜ್ವಲವಾಗಲಿ, ಸಮಾಜಕ್ಕೆ ಇವರ ಕಲಾ ಸೇವೆ ನಿರಂತರ ವಾಗಿ ಸಿಗಲಿ ಎಂಬುದೇ ಕೋಸ್ಟಲ್ ಬುಲೆಟಿನ್ ತಂಡದ ಹಾರೈಕೆ.

Leave a Comment