ಪ್ರಶ್ನೆಯೊಂದು ನನ್ನದು ಯಾರಿಗೆ ಬಂತು ಸ್ವಾತಂತ್ರ್ಯ...? ಸ್ವಾಭಿಮಾನ -ಸ್ವಾವಲಂಭನೆಯ ಎಲ್ಲೆಯ ಮೀರಿ ಜಾತಿಗಳ ಹೆಸರಲಿ ಆಡುವ ಗುದ್ದಾಟವ ನಿಲ್ಲಿಸಿ ಕುದಿಯುವ ನೆತ್ತರನೊಮ್ಮೆ ತಣ್ಣಗಾಗಿಸಿ ಸಾಧ್ಯವಾದರೆ ನನ್ನ ಪ್ರಶ್ನೆಗೊಮ್ಮೆ ಉತ್ತರಿಸಿ., ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ...?
ನಾನೇನ್ನುವ ಆಸೆಯ ಗೂಟವ ಕಿತ್ತೆಸೆದು
ನಮ್ಮವರೆನ್ನುವ ಸಂಬಂಧಗಳ ಪಕ್ಕಕ್ಕಿಟ್ಟು
ಜೀವದ ಹಂಗ ತೊರೆದು ವೀರಯೋಧರೆಲ್ಲಾ ಹೋರಾಟಕ್ಕಿಳಿದ್ದದ್ದು
ಅದಾವ ಸ್ವಾತಂತ್ರ್ಯಕ್ಕಾಗಿ ...ಉತ್ತರಿಸುವಿರಾ
ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ..?
ಮೇಜಿನ ಅಡಿಯಲಿ ತಾಂಡವವಾಡುವ ನೋಟಿಗೆ ಬಂತೇ
ಅತ್ಯಾಚಾರವೆಸಗುವ ಪಾಪಿ ಪುಂಡರ ಬಿಸಿ ರಕ್ತಕೆ ಬಂತೇ
ಬ್ರಷ್ಟಾಚಾರಿಗಳ ಜೇಬಿನ ಒಳ ಬಂತೇ
ಪಾಪಿಗಳ ಪಾಪಕೆ
ದಾರಿಯಾಗಿ ಬಂತೇ
ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ....?
ಗಂಜಿಯಿಲ್ಲದ ಹೊಟ್ಟೆಗೆ ಬರಲಿಲ್ಲ,
ಕೂಲಿಯವನ ಕೈಗೆ ಕಾವಲಾಗಿ ಬರಲಿಲ್ಲ,
ನೀಯತ್ತಾಗಿ ದುಡಿಯುವವನ ದುಡಿಮೆಗೆ ಬರಲಿಲ್ಲ,
ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ,
ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ..?
ಉತ್ತರಿಸುವಿರಾ.....?
ಲೇಖನ :ಸಬಿತ
ದ್ವಿತೀಯ ಬಿ.ಎಡ್
ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು.













