ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಯುವ ಸಮೂಹಕ್ಕೆ ಪ್ರೇರಣೆಯಾದ ಭರತ್ ರಾಜ್ ತಾಳ್ತಾಜೆ .

Coastal Bulletin
ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಯುವ ಸಮೂಹಕ್ಕೆ ಪ್ರೇರಣೆಯಾದ ಭರತ್ ರಾಜ್ ತಾಳ್ತಾಜೆ .

ಕಾಸರಗೋಡು : ಇಂದಿನ ಯುವ ಪೀಳಿಗೆಯು ಆಕರ್ಷಕವಾಗಿ ಕಾಣಲು ಹಾಗೂ ಎಲ್ಲರಿಂದಲೂ ಮೆಚ್ಚುಗೆ ಗಳಿಸಲು ತಮ್ಮನ್ನೆ ಎಲ್ಲರೂ ನೋಡುವಂತೆ ಕೇಶ ವಿನ್ಯಾಸ ಮಾಡಿ ಸಂಭ್ರಮಿಸುವ ಕಾಲದಲ್ಲಿ,ಇಲ್ಲೊಬ್ವರು ತಮ್ಮ ಆಕರ್ಷಕ ಕೇಶರಾಶಿಯಿಂದ ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಉದ್ದವಾಗಿ ಬೆಳೆದಂತ ಕೇಶವನ್ನು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿ ಯುವ ಸಮುದಾಯಕ್ಕೆ ಪ್ರೇರಣೆಯಾಗಿ ಮಾದರಿಯಾಗಿದ್ದಾರೆ.

ಕಾಸರಗೋಡು ಬಾಯಾರು ಗ್ರಾಮದ ತಾಲ್ತಾಜೆ ನಿವಾಸಿ ವೃತ್ತಿಯಲ್ಲಿ ಸಾಫ್ಟವೇರ್ ಡೆವಲಪರ್ ಆಗಿರುವ ಭರತ್ ರಾಜ್ ತಾಲ್ತಾಜೆ ಇವರು ತಮ್ಮ ಕೇಶದಾನ ಮಾಡಿ ಸಮಾಜಕ್ಕೆ ಮಾದರಿಯಾದ ಯುವಕ. ಸದಾ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿರುವ ಇವರು ತನ್ನಿಂದಾಗಿ ಕಷ್ಟದಲ್ಲಿರುವ ಇನ್ನೊಂದು ಜೀವಕ್ಕೆ ಸಹಾಯವಾಗುದರೊಂದಿಗೆ, ಮುಂದಿನ ದಿನಗಳಲ್ಲಿ ಯುವ ಸಮೂಹಕ್ಕೆ ಪ್ರೇರಣೆಯಾಗಲಿ ಎನ್ನುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ.


ಒಟ್ಟಿನಲ್ಲಿ ಇಂದಿನ ಯುವಪೀಳಿಗೆಗೆ ಮಾದರಿಯಾಗಿರುವ ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಕ್ಕೆ ಇವರ ಸೇವೆ ಸಿಗಲಿ ಎಂಬುದೇ ಈ ಸಂದರ್ಭದಲ್ಲಿ ಕೋಸ್ಟಲ್ ಬುಲೆಟಿನ್ ತಂಡದ ಹಾರೈಕೆ.

Leave a Comment