ಬಂಟ್ವಾಳ :ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಸುದೀರ್ಘ 12 ವರ್ಷಗಳ ಜನಪರ ಆಡಳಿತ, ಅಭಿವೃದ್ಧಿ ಮತ್ತು ಸೇವಾ ಸಂಕಲ್ಪದ ಅಂಗವಾಗಿ ಬಂಟ್ವಾಳ ಮಂಡಲದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರಿಂದ ವಿಶೇಷ ಸಂಪರ್ಕ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಹಿರಿಯರ ಸೂಚನೆಯಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಕಾರ್ಯಕರ್ತರ ಜೊತೆ ಹಿರಿಯ ಬಿಜೆಪಿ ಕಾರ್ಯಕರ್ತರ ಮನೆಗೆ ಬೇಟಿ ನೀಡಿ ಗೌರವಿಸುವ ಕಾರ್ಯ ಮಾಡಿದ್ದೇನೆ ಮತ್ತು ಜಿಲ್ಲೆಯ ಸಂಸದನಾಗಿ ಈ ಕಾರ್ಯ ಮಾಡಲು ನನ್ನ ಪಾಲಿಗೆ ಬಂದ ಸುಯೋಗ ಎಂದು ಭಾವಿಸಿದ್ದೇನೆ.ಅತ್ಯಂತ ಸಂತಸ ಕೂಡ ಆಗಿದೆ ಎಂದು ಅವರು ತಿಳಿಸಿದರು.
ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮದ ಫಲವಾಗಿ ಪಕ್ಷ ಸಂಘಟನಾತ್ಮಕವಾಗಿ ಬೆಳೆದಿದೆ ಮತ್ತು ಬಹುತೇಕ ಎಲ್ಲಾ ಕಡೆಗಳಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.ಹಿಂದುತ್ವ ಮತ್ತು ಅಭಿವೃದ್ಧಿಗೆ ಬಿಜೆಪಿ ಹೊರತು ಬೇರೆ ಪಕ್ಷವಿಲ್ಲ.ಹಾಗಾಗಿ ಮುಂದಿನ ಪೀಳಿಗೆಗೆ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಈಗಲೂ ಜನ ನೆನಪು ಮಾಡಿಕೊಳ್ಳುತ್ತಾರೆ.ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕೂಡ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ವ್ಯಕ್ತಪಡಿಸಿದರು.ದ.ಕ.ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದು,ಹಾಗೂ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಿ ಎಂದು ಅವರು ತಿಳಿಸಿದರು.ನಮ್ಮ ನಮ್ಮ ಬೂತ್ ಗಳಲ್ಲಿ ಯುವ ಪೀಳಿಗೆಯನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಮುಂದಿನ ದಿನಗಳು ಚುನಾವಣಾ ವರ್ಷಗಳಾಗಿದ್ದು, ಕಾರ್ಯಕರ್ತರು ಪಕ್ಷ ಸಂಘಟನೆಯ ಜವಾಬ್ದಾರಿ ಜೊತೆಗೆ ಗ್ರಾಮದ ಪ್ರತಿಯೊಂದು ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.
ಎಸ್‌ಐಆರ್ ಬಗ್ಗೆ ವಿಶೇಷ ಕಾಳಜಿ ವಹಿಸಿ, ಬಿಜೆಪಿ ಗೆಲುವಿಗೆ ಸದಾಕಾಲವೂ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.ಪ್ರತಿ ಗ್ರಾಮವು ಬಿಜೆಪಿ ಗ್ರಾಮವಾಗಿ ಮಾರ್ಪಾಡು ಮಾಡಲು ಕಾರ್ಯಕರ್ತರ ಶ್ರಮದ ಫಲವಾಗಿ ಮಾತ್ರ ಸಾಧ್ಯ ಎಂದು ಹೇಳಿದರು. ಬಿಜೆಪಿಯಿಂದ ಮಾತ್ರ ಬದಲಾವಣೆ ಸಾಧ್ಯ. ಅಭಿವೃದ್ದಿಯ ಜೊತೆ ಶಾಂತಿ ಮತ್ತು ನೆಮ್ಮದಿಯ
ಬದುಕಿಗಾಗಿ ಎಲ್ಲರನ್ನು ಬಿಜೆಪಿಯನ್ನು ಬೆಂಬಲಿಸುವಂತೆ ಮನವೊಲಿಸಲು ಅವರು ತಿಳಿಸಿದರು.
ಹಿರಿಯರಾದ ಗೋಪಾಲ ಸುವರ್ಣ, ಜಾಕ್‌ಹೌಸ್, ಪ್ರಮೋದ್ ಕುಮಾರ್, ಅಜ್ಜಿಬೆಟ್ಟು,ಶಾಂತವೀರ ಪೂಜಾರಿ ನಾವೂರ, ದಾಮೋದರ ನಾಯಕ್, ಉಳಿ,ಬೂಬ ಸಪಲ್ಯ ಮೂಡುಪಡುಕೋಡಿ,ವಿಶ್ವನಾಥ ಗೌಡ, ರಾಯಿ,ಕರುಣೇಂದ್ರ ಪೂಜಾರಿ ಕೊಂಬ್ರರಬೈಲು,ಭಾಸ್ಕರ ಅಜೆಕಲ,ರಮೇಶ್ ಪೂಜಾರಿ ಮತ್ತು ಪ್ರಭಾಕರ ಬೋಳಂಗಡಿ,ಶಿವಾನಂದ ಬರಿಮಾರು,ನಾರಾಯಣ ಗೌಡ ಏಮಾಜೆ ನೆಟ್ಲಮುಡ್ನರು,ಪಿ.ಜಿ.ಕೇಶವ ಭಟ್ ಕರೋಪಾಡಿ,ಪಿ.ಲಿಂಗಪ್ಪ ಕನ್ಯಾನ ಅವರುಗಳ ಮನೆಗೆ ಬೇಟಿ ಮಾಡಿ ಗೌರವ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಬಿಜೆಪಿ ವಕ್ತಾರ ಮಾದವ ಮಾವೆ,ಪಕ್ಷದ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್ ದಾಸ ಬಂಟ್ವಾಳ, ದೇವಪ್ಪ ಪೂಜಾರಿ,ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ಪುಷ್ಪರಾಜ್ ಚೌಟ, ಅಭಿಷೇಕ್ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ಸಂಪತ್ ಕುಮಾರ್, ದಿನೇಶ್ ಶೆಟ್ಟಿ ದಂಬೆದಾರ್, ರತ್ನಾಕರ್ ಚೌಟ,ಕಮಲಾಕ್ಷಿ ಕೆ.ಪೂಜಾರಿ, ಹರ್ಷಿಣಿ ಪುಷ್ಪಾನಂದ, ಲಖಿತಾ ಆರ್ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಪ್ರಣಾಮ್ ರಾಜ್,ತನಿಯಪ್ದ ಗೌಡ,ಹರೀಶ್ ರೈ ಪೆರಾಜೆ, ಸನತ್ ಕುಮಾರ್ ರೈ, ನಾಗೇಶ್ ಭಂಡಾರಿ, ಅಶೋಕ್ ರೈ ನೇರಳಕಟ್ಟೆ,ಸುರೇಶ್ ಟೈಲರ್, ಭಾಸ್ಕರ ಟೈಲರ್, ಹರಿಪ್ರಸಾದ್ , ಜನಾರ್ದನ ಬೊಂಡಾಲ,ಹರೀಶ್ ಶೆಟ್ಟಿ ಪಡು, ಸುರೇಶ್ ಕುಲಾಲ್, ಸದಾನಂದ ನಾವೂರ, ಚಿದಾನಂದ ರೈ ಕಕ್ಯ, ಸುರೇಶ್ ಮೈರ,ವಸಂತ ಪೂಜಾರಿ, ರಶ್ಮಿತ್ ಶೆಟ್ಟಿ, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸಂದೇಶ್ ಶೆಟ್ಟಿ ಪೊಡಂಬು,ಸತೀಶ್ ಪೂಜಾರಿ, ವಿಜಯ ಕುಮಾರ್ ಅಮ್ಟಾಡಿ,ಬಬಿತಾ ಕೋಟ್ಯಾನ್, ಜಯಂತ್ ಗೌಡ, ಜಗದೀಶ್ ಭಂಡಾರಿ, ಮೋನಪ್ಪ ದೇವಶ್ಯ,ಜಿನರಾಜ್ ಕೋಟ್ಯಾನ್, ಜಯಶ್ರೀ , ಅಕ್ಷತಾ, ಆನಂದ ಶಂಭೂರು, ಸದಾಶಿವ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ,ಅರವಿಂದ ,ನಾರಾಯಣ ಶೆಟ್ಟಿ ತೋಟ, ಶಕೀಲಾ ಪೂಜಾರಿ, ರಘ ಶೆಟ್ಟಿ ಕನ್ಯಾನ, ಆಶ್ವಥ್ ಶೆಟ್ಟಿ ಕರೋಪಾಡಿ, ನವೀನ್ ಕನ್ಯಾನ,ಮಾಂತೇಶ್ , ಪ್ರಕಾಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.















