ತುಂಬೆ: ಶಾರದಾ ರಜತ ಮಹೋತ್ಸವ ಸಮಿತಿ ಅಶ್ರಯದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ. ಅಕ್ಷಯ ನಿಧಿ ವಿಜೇತರ ಆಯ್ಕೆ ಸಮಾರಂಭ.

Coastal Bulletin
ತುಂಬೆ: ಶಾರದಾ ರಜತ ಮಹೋತ್ಸವ ಸಮಿತಿ ಅಶ್ರಯದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ. ಅಕ್ಷಯ ನಿಧಿ ವಿಜೇತರ ಆಯ್ಕೆ ಸಮಾರಂಭ.

ಬಂಟ್ವಾಳ :ತುಂಬೆ ಶ್ರೀ ಶಾರದಾ ಸಮುದಾಯ ಭವನದಲ್ಲಿ ರಜತ ಮಹೋತ್ಸವ ಸಮಿತಿ ವತಿಯಿಂದ ವೇದಮೂರ್ತಿ ಶ್ರೀ ಪೊಳಲಿ ಗಿರಿ ಪ್ರಕಾಶ್ ತಂತ್ರಿ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆಯು ವಿಜೃಂಭಣೆಯಿಂದ ಜೂ.14ರಂದು ಆದಿತ್ಯವಾರ ನಡೆಯಿತು.

ಬಳಿಕ ನಡದ ಶ್ರೀ ಶಾರದಾ ರಜತ ಮಹೋತ್ಸವದ ಅಕ್ಷಯ ನಿಧಿ ವಿಜೇತರ ಆಯ್ಕೆ ಸಮಾರಂಭದಲ್ಲಿ ಉದ್ಯಮಿ ಜಯಪ್ರಕಾಶ್ ತುಂಬೆ, ಸದಾನಂದ ಪೂಜಾರಿ ಸ್ಥಾಪಕಾಧ್ಯಕ್ಷರು ಬಿಲ್ಲವ ಬ್ರಿಗೇಡ್ ಮಂಗಳೂರು, ನಿವೃತ್ತ ಮುಖ್ಯ ಶಿಕ್ಷಕ ಸೇಸಪ್ಪ ಮಾಸ್ಟರ್, ಅಡ್ಯಾರ್ ಆಂಜನೇಯ ದೇವಸ್ಥಾನದ  ಅಧ್ಯಕ್ಷ ರಮೇಶ್ ಅಡ್ಯಾರ್ ತುಂಬೆ, ರೋಟರಿ ಕ್ಲಬ್ ಬಿ,ಸಿ ರೋಡ್ ಸಿಟಿ ಮಾಜಿ ಅಧ್ಯಕ್ಷೆ ಪಲ್ಲವಿ ಕಾರಂತ್, ತುಂಬೆ ಸುರಭಿ ಸ್ಟೀಲ್ ಇಂಡಸ್ಟ್ರೀಸ್

ಮಾಲಕ ನವೀನ್ ಕುಮಾರ್ ಕೊಡ್ಮಾಣ್ ,ತುಂಬೆ ಜೆ ಕೆ ಇಂಡಸ್ಟ್ರೀಸ್  ಮಾಲಕ ಜೀವನ್ ಕುಮಾರ್, ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈoದಾನ, ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲ್ ಉಪಸ್ಥಿತರಿದ್ದರು.

ಸುಶಾನ್ ಆಚಾರ್ಯ ಸ್ವಾಗತಿಸಿದರು, ಸಂತೋಷ್ ಕೋಟ್ಯಾನ್ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಯೋಗೀಶ್ ಅಂಚನ್ ಕಜೆಕಂಡ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಅನ್ನಸಂತರ್ಪಣೆ ನೆರವೇರಿತು.

Leave a Comment