ಬಂಟ್ವಾಳ::ಅವಿರತ ಶ್ರಮ ಮತ್ತು ಸತತ ಸಾಧನೆಯೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರ ಅಗತ್ಯ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾದಾಗ ಮಾತ್ರ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಂಬೈ ಉದ್ಯಮಿ ಬಾಲಕೃಷ್ಣ ಎಂ.ರೈ ಹೇಳಿದರು.
ಇಲ್ಲಿನ ಬ್ರಹ್ಮರಕೂಟ್ಲು ಸಮೀಪದ ಬಂಟರ ಭವನದಲ್ಲಿ ಭಾನುವಾರ ನಡೆದ ಬಂಟವಾಳ ಬಂಟರ ಸಂಘದ ವಾರ್ಷಿರ್ಕೋತ್ಸವ ಮತ್ತು ಸಾಂಸ್ಕೃತಿಕ ವೈಭವ ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆ ಹಾಕಬೇಕು ಎಂದರು. ವಿದ್ಯಾರ್ಥಿ ವೇತನ ವಿತರಣೆಗೆ ಆರ್ಥಿಕ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬದಿಗುಡ್ಡೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ ಅಡ್ಯಾರುಗುತ್ತು ಶುಭ ಹಾರೈಸಿದರು.
ಆರಂಭದಲ್ಲಿ ಪ್ರಗತಿಪರ ಕೃಷಿಕ ನಿರಂಜನ್ ಸೇಮಿತ ಕುಂದಬೆಟ್ಟು ಇವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಇದೇ ವೇಳೆ 15 ವಲಯ ಸಂಘಗಳ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪ್ರದರ್ಶನ ಗೊಂಡಿತು.
ನಿತಿನ್ ರೈ ಮತ್ತು ಅನಿತಾ ಶೆಟ್ಟಿ ಸ್ಪರ್ಧೆ ಕಾರ್ಯಕ್ರಮ ನಿರೂಪಿಸಿದರು. ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿದರು.
ಸಂಘದ ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿ ಶ್ರೀವಿದ್ಯಾ ಎ. ರೈ, ಮಹಿಳಾ ವಿಭಾಗ ಅಧ್ಯಕ್ಷೆ ಸುಜಾತ ಪಿ. ರೈ, ಯುವ ವಿಭಾಗ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರುಗುತ್ತು, ಸಾಂಸ್ಕೃತಿಕ ಸಂಚಾಲಕ ಗಣೇಶ್ ಶೆಟ್ಟಿ ಗೋಳ್ತಮಜಲು ಮತ್ತಿತರರು ಇದ್ದರು.
ಸಂಘದ ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ಸ್ವಾಗತಿಸಿದರು. ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಾಸ್ತಾವಿಕ ಮಾತನಾಡಿ, 'ಸಂಘವು ಪ್ರತೀ ವರ್ಷ ರೂ. 60 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿದೆ'ಎಂದರು. ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.















