ಬಂಟ್ವಾಳ : ಭಾರತೀಯ ಅಂಚೆ ಇಲಾಖೆಯಲ್ಲಿ ಜಿ ಡಿ ಎಸ್ ಪ್ಯಾಕರ್ ಆಗಿ ಸಿದ್ದಕಟ್ಟೆ ಉಪ-ಅಂಚೆ ಕಚೇರಿಯಲ್ಲಿ ಕಳದ 44 ವರ್ಷಗಳ ಕಾಲ ನಿಷ್ಟೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಟೆಯಿಂದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶ್ರೀಧರ ಪೂಜಾರಿ ಅವರ ಸೇವಾ ನಿವೃತ್ತಿ ಸಮಾರಂಭ ಜೂನ್ 19ರಂದು ಮದ್ಯಾಹ್ನ 3ಗಂಟೆಗೆ ಸಿಂತಿ ಕಾಂಪ್ಲೆಕ್ಸ್ ಸಿದ್ದಕಟ್ಟೆ ಅಂಚೆ ಕಚೇರಿ ಸವೀಪ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















