Coastal Bulletin

ಡಿ.10 ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾಗಿಯಾಗುವುದು ಖಚಿತ ಗೊಂಡಿದೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಜೆ 6 ರಿಂದ ನಡೆಯಲಿರುವ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಲು ವಿದ್ಯಾಕೇಂದ್ರದ ಸಂಸ್ಥಾಪಕ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರು ಕೋರಿದ್ದರು.

ಆದರೆ ಅವರ ಬರುವಿಕೆ ಅಧಿಕೃತಗೊಂಡಿರಲಿಲ್ಲ.  ಇಂದು ಮುಖ್ಯಮಂತ್ರಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ

ಭಾಗಿಯಾಗುವ ಬಗ್ಗೆ ಮುಖ್ಯ ಮಂತ್ರಿ ಕಚೇರಿಯಿಂದಲೇ ಅಧಿಕೃತವಾಗಿದೆ.

ಪ್ರವಾಸದ ವಿವರ ಬಂದಿದ್ದು, ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅ ಬಳಿಕ ಸಂಜೆ ನೇರವಾಗಿ ಕಲ್ಕಡ್ಕದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಕಲ್ಕಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನೂತನವಾಗಿ ‌ನಿರ್ಮಾಣಗೊಂಡ ಈಜುಕೊಳವನ್ನು ಮುಖ್ಯಮಂತ್ರಿ ಗಳು ಉದ್ಘಾಟನೆ ಮಾಡಲಿದ್ದಾರೆ .

Leave a Comment