Coastal Bulletin

ಬಂಟ್ವಾಳ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣವಾಗಲಿರುವ ಹನುಮ ಸಾನಿಧ್ಯ ಪುಣ್ಯ ಭೂಮಿ ವಿಜಯನಗರ ಫರಂಗಿಪೇಟೆ ಇಲ್ಲಿ ಡಿ 24ರಂದು ನಡೆಯಲಿರುವ ಶ್ರೀ ರಾಮ ನಾಮ ತಾರಕ ಜಪಯಜ್ಞದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ 8ರಂದು ಗುರುವಾರ ವೀರಾಂಜನೇಯ ವ್ಯಾಯಾಮ ಶಾಲೆಯ ಆವರಣದಲ್ಲಿ ನಡೆಯಿತು.

ವಿಜಯಲಕ್ಷ್ಮಿ ಸ್ಟೀಲ್ಸ್ ಬಿಸಿರೋಡ್ ಇದರ  ಮಾಲಕರಾದ ರಾಘವೇಂದ್ರ ಪ್ರಭುರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ ,ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ  ತೇವು ತಾರಾನಾಥ ಕೊಟ್ಟಾರಿ,ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಗಡಿಕಾರರಾದ ಅರ್ಕುಳ  ಕಂಪ ಸದಾನಂದ ಆಳ್ವ, ಶ್ರೀ ವೀರಾಂಜನೇಯ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ

ಗಾಂಭೀರ ಸುಜೀರು ಗುತ್ತು , ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಪ್ರದಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ , ಸಂಚಾಲಕರಾದ ವಿಠ್ಠಲ್ ಆಳ್ವ ಗರೋಡಿ. ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷರಾದ  ಅನಿಲ್ ಪಂಡಿತ್ , ಕಾರ್ಯದರ್ಶಿ ಸಂತೋಷ್ ನೆತ್ತರಕೆರೆ , ಕೋಶಾಧಿಕಾರಿ ಮನೋಜ್ ತುಪ್ಪೆಕಲ್ಲು, ಸಂಯೋಜಕರಾದ ದಾಮೋದರ ನೆತ್ತರಕೆರೆ  ಹಾಗು ಇತರ ಪದಾಧಿಕಾರಿಗಳು  ಉಪಸ್ಥಿತರಿದ್ದರು.

Leave a Comment