ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಚತುಷ್ಪಧ ಹೆದ್ದಾರಿ ಹಾಗೂ ಮೇಲ್ಸೆತುವೆ ನಿರ್ಮಾಣಕ್ಕಾಗಿ ಗಾಳಿ, ನೆರಳು ನೀಡುತ್ತಿದ್ದ ದೊಡ್ಡ ದೊಡ್ಡ ಅಶ್ವಥ ಮರಗಳು ಧರಶಾಹಿಯಾದ ಬಳಿಕ ಜನರಿಗೆ, ಪಕ್ಷಿಗಳಿಗೆ ನೆರಳಿಗಾಸರೆಯಾಗುವ ಮರಗಳು ಅಪರೂಪವಾಗಿದೆ. ವಿವಿಧ ಕೆಲಸಕ್ಕೆ ನಗರಕ್ಕೆ ಬಂದ ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸ್ವಲ್ಪ ಹೊತ್ತು ಮರದಡಿಯಲ್ಲಿ ವಿಶ್ರಾಂತಿ ಪಡೆಯೋಣವೆಂದರೆ ನಗರದಲ್ಲಿ ಮರಗಳ ಸಂಖ್ಯೆ ಕ್ಷೀಣವಾಗಿದೆ. ಅಪರೂವೆಂಬಂತೆ ನೇರಳೆ ಗಿಡವೊಂದು ಹೆಮ್ಮರವಾಗಿ ಬೆಳೆದು ಇಂದು ಸಾರ್ವಜನಿಕರಿಗೆ ನೆರಳು ನೀಡುತ್ತಿದೆ,
ಪಕ್ಷಿಗಳಿಗೆ ಆಹಾರಕ್ಕಾಗಿ ಹಣ್ಣುಗಳನ್ನು ನೀಡುತ್ತಿದೆ.ಈ ನೇರಳೆ ಮರ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ, ತಾಲೂಕು ಆಡಳಿತ ಸೌಧದ ಮುಂಭಾಗ ಇದೆ. ಬೇಸಿಗೆಯಲ್ಲಿ ಈ ಮರದ ಅಗತ್ಯತೆ ಏನು ಎನ್ನುವುದು ಇದರಡಿಗೆ ಬಂದ ಎಲ್ಲರಿಗೂ ಅರಿವಾಗಿದೆ. ವಿವಿಧ ಕೆಲಸಗಳಿಗೆ ಬಿ.ಸಿ. ರೋಡಿಗೆ ಬಂದ ಜನ ಈ ಮರದಡಿಯಲ್ಲಿ ನೆರಳಿನ ಆಶ್ರಯ ಪಡೆಯುತ್ತಾರೆ. ಕೆಲವರು ತಮ್ಮ ವಾಹನಗಳನ್ನು ಇಡಲು ಈ ಮರದಡಿಯನ್ನು ಅವಲಂಬಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಚುನಾವಣಾ ನಾಮಪತ್ರ ಸಲ್ಲಿಕೆಯ ಭರಾಟೆ ನಡೆಯುತ್ತಿದ್ದು ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು, ಜನಸಾಮಾನ್ಯರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಈ ಮರದ ನೆರಳಿನಡಿಗೆ ಧಾವಿಸುತ್ತಿದ್ದಾರೆ.
ಪಕ್ಷಿಗಳಿಗೆ ಆಸರೆ:
ಮರದಲ್ಲಿನ ನೇರಳೆ ನೀಡುತ್ತಿದೆತಿನ್ನಲು ಪಕ್ಷಿಗಳು ಬರುತ್ತಿವೆ. ನೆರಳಿಗೆ ನಿಂತ ಜನರು ಕೂಡ ಕೈಗೆಟಕುವ ನೇರಳೆ ಹಣ್ಣುಗಳನ್ನು ಕೊಯ್ದು ರುಚಿ ಚಪ್ಪರಿಸುತ್ತಾರೆ. ಮರಕ್ಕೆ ಬರುವ ಹಕ್ಕಿಗಳಿಗೆ ಇಲ್ಲಿನ ಪಕ್ಷಿ ಪ್ರೀಯರು ಮಡಕೆಯಲ್ಲಿ ನೀರು ಇಟ್ಟು ಪೋಷಿಸುತ್ತಿದ್ದಾರೆ.
ಸಾರ್ವಜನಿಕ ವಿಶ್ರಾಂತಿ ಸ್ಥಳ:
ಈ ಮರದಡಿಯಲ್ಲಿ ನಿತ್ಯ ಸೇರುವ ಯುವಕರು ಇಲ್ಲೊಂದು ಕಟ್ಟೆ
ಫ್ರೆಂಡ್ಸ್ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಮರದ ಸುತ್ತ ಕಟ್ಟೆಯನ್ನು ನಿರ್ಮಿಸಿ ಜನರು ಕುಳಿತುಕೊಳ್ಳಲು ಟೈಲ್ಸ್ ಅಳವಡಿಸಿದ್ದಾರೆ. ಅದರ ಮಧ್ಯ ಭಾಗದಲ್ಲಿ ಹುಲ್ಲುಗಳನ್ನು ಬೆಳೆಸಿ ಆಕರ್ಷಣೀಯಗೊಳಿಸಿದ್ದಾರೆ. ಅದರ ಪಕ್ಕದಲ್ಲೇ ಶೀಟ್ ಹಾಕಿ ಸಾರ್ವಜನಿಕ ವಿಶ್ರಾಂತಿ ಸ್ಥಳವನ್ನು ನಿರ್ಮಿಸಿದ್ದಾರೆ. ಜನರು ತಮ್ಮ ಬಿಡುವಿನ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ನಗರ ಮಧ್ಯೆ ಮರ ಬೆಳೆದದ್ದು(ಉಳಿದದ್ದು) ಹೇಗೇ?
ಈಗ ಹೆಮ್ಮರವಾಗಿ ಬೆಳೆದು ನಿಂತಿರುವ ನೇರಳೆ ಮರದ ಅಡಿಯಲ್ಲಿ ಈ ಹಿಂದೆ ಯಕ್ಷಗಾನದ ರಂಗಸ್ಥಳವಿದ್ದು ಪ್ರತೀ ವರ್ಷ ದೇವಿ ಮಹಾತ್ಮೆ ಯಕ್ಷಗಾನ ನಡೆಯುವಾಗ ಉಯ್ಯಾಲೆಯ ಹಿಂಭಾಗದಲ್ಲಿ ನೆರಳೆ ಮರದ ಗೆಲ್ಲುಗಳನ್ನು ಇಟ್ಟು ವನದ ಕಲ್ಪನೆ ನೀಡುತ್ತಿದ್ದರು. ಕ್ರಮೇಣ ಇದೇ ಜಾಗದಲ್ಲಿ ನೇರಳೆ ಗಿಡವೊಂದು ಬೆಳೆಯಲಾರಂಭಿಸಿತ್ತು. ಇದು ಬೀಜ ಬಿದ್ದು ಗಿಡವಾಯಿತೋ ಅಥವಾ ಯಾರದಾರೂ ನೆಟ್ಟಿದ್ದಾರೋ ಎನ್ನುವುದು ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಆದರೆ ಈಗ ಸ್ಥಳೀಯರು ಗಿಡವನ್ನು ಪೋಷಣೆ ಮಾಡುತ್ತಿರುವುದಾರಿಂದ ಅದು ಹೆಮ್ಮರವಾಗಿ ಬೆಳೆದು ತನ್ನಡಿಗೆ ಬರುವ ಎಲ್ಲರಿಗೂ ಜಾತಿ, ಧರ್ಮ, ಪಕ್ಷದ ಭೇದ ನೋಡದೆ ಶುದ್ದಗಾಳಿ ಹಾಗೂ ನೆರಳು ನೀಡುತ್ತಿದ















