ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ.
ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕ.ಅಪಘಾತದಲ್ಲಿ ಆಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದೆ.ಈತನಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಕೂಡ ವೆಲ್ಡಿಂಗ್ ಕೆಲಸ ಮಾಡುವವರಾಗಿದ್ದು, ಬಿಸಿರೋಡಿನಿಂದ
ಪುಂಜಾಲಕಟ್ಟೆ ಕಡೆಗೆ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀವೇಗದ ಬಂದ ಕಾರು ಢಿಕ್ಕಿ ಹೊಡೆದಿದೆ.
ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















