ಬಂಟ್ವಾಳ: ತಾಲೂಕು ಬಂಟ್ವಾಳ ಹೋಬಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಜೆ.ಜನಾರ್ದನ್ ಮೈಸೂರು ಜಿಲ್ಲೆಗೆ ವರ್ಗಾವಣೆ ಗೊಂಡಿರುವ ಪ್ರಯುಕ್ತ ಅವರನ್ನು ಇಂದು ಬೀಳ್ಕೊಡುಗೆ ಮಾಡಲಾಯಿತು.
ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಹೋದ್ಯೋಗಿಗಳು ಶುಭಕೋರಿ ಪ್ರಶಂಸಿದರು.ಬಳಿಕ ಅವರಿಗೆ ಪೇಟಾ ಧರಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಸುಧೀರ್ಘ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜೆ ಜನಾರ್ಧನ್ ರವರ ಸೇವೆಯನ್ನು ಎಲ್ಲಾ ಸಹದ್ಯೋಗಿ ಮಿತ್ರರು ಶ್ಲಾಘಿಸಿದರು ಮತ್ತು ಎಲ್ಲರೂ ಆತ್ಮೀಯವಾಗಿ ಬೀಳ್ಕೊಟ್ಟರು..
ಕಾರ್ಯಕ್ರಮದಲ್ಲಿ ಬಂಟ್ವಾಳ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ತುಂಬೆ, ಖಜಾಂಚಿ ಬಸಯ್ಯ
ಆಲಿಮಟ್ಟಿ, ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ರೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಕಛೇರಿಯ ಎಲ್ಲಾ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಛೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ರಾದ ನರೇಂದ್ರನಾಥ್ ಮಿತ್ತೂರು ರವರು ವಹಿಸಿದ್ದರು, ಗ್ರಾಮ ಆಡಳಿತ ಅಧಿಕಾರಿ ನಿತೇಶ್ ಕಡೇಮನಿ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಚುನಾವಣಾ ಶಿರಸ್ತೇದಾರ್ ರಾದ ನವೀನ್ ಕುಮಾರ್ ಮಾಡಿದರು, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಉಳ್ಳಟ್ಟಿ ವಂದಿಸಿದರು..















