ಬಂಟ್ವಾಳ:'ತುಳುನಾಡಿನ ಆಟಿ ತಿಂಗಳ ಆಹಾರ ಪದ್ಧತಿ ಆರೋಗ್ಯಪೂರ್ಣವಾಗಿದ್ದು, ಈ ಸಂಸ್ಕೃತಿ ಮತ್ತು ಸಂಪ್ರದಾಯ ಯುವಜನತೆಗೆ ನೆನಪಿಸಲು ದುಬೈನಲ್ಲೂ ಕಾರ್ಯಕ್ರಮ ಆಯೋಜಿಸುವ ಮೂಲಕ ಇಲ್ಲಿನ ತುಳುವರನ್ನು ಆಕರ್ಷಸುವಲ್ಲಿ ಯಶಸ್ವಿಯಾಗಿದೆ' ಎಂದು ನಿವೃತ್ತ ಸೇನಾನಿ ಗೋಪಾಲ ಬೋಳಿಯಾರ್ ಹೇಳಿದ್ದಾರೆ.
ದುಬೈ ಯು ಎ ಇ ಗಾಣಿಗ ಫ್ಯಾಮಿಲಿ ಸಂಘಟನೆ ವತಿಯಿಂದ ದುಬೈ ನೈಟ್ ಕ್ಯಾಸ್ಟಲ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ 'ಗಾಣಿಗ ಸಂಗಮ-2026' ಮತ್ತು 'ಆಟಿದ ಕಮ್ಯೆನ ಗಾಣಿಗೆರ್ನ ತಮ್ಮನ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರಮುಖರಾದ ಅಶ್ವಿನ್ ವಾಸು ಪುತ್ತ್ರನ್ ಮುಂಬೈ, ಕೊರಿಯೋಗ್ರಾಫರ್ ಗೌತಮ್ ಬಂಗೇರ ಮಂಗಳೂರು ಶುಭ ಹಾರೈಸಿದರು. ಇದೇ ವೇಳೆ ಯುವ ಕ್ರಿಕೆಟಿಗ ಮಾಸ್ಟರ್
ವ್ಯಾನ್ ಪುತ್ತ್ರನ್ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಆಟಿ ಕೂಟದ ಸಹಭೋಜನ ನಡೆಯಿತು.
ಕ್ರಿಕೆಟಿಗ ವ್ಯಾನ್ ದುಬೈ, ಕ್ರೀಡಾ ಸಂಚಾಲಕ ರಮೇಶ್ ಸಪಳಿಗ, ಸಾಂಸ್ಕೃತಿಕ ಸಂಚಾಲಕ ಹರ್ಷದ್ ಸಪಳಿಗ ಮತ್ತಿತರರು ಇದ್ದರು.
ಸಮಿತಿ ಸಂಚಾಲಕ ಸುಪ್ರೀತ್ ಗಾಣಿಗ ಮದರ್ೋಳಿ ಸ್ವಾಗತಿಸಿ, ವಂದಿಸಿದರು. ಹಿತೇಶ್ ಗಾಣಿಗ ಕೈಕಂಬ ಮತ್ತು ಕಾರ್ತಿಕ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.















