ತುಂಬೆ: ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಂಘ ಉದ್ಘಾಟನೆ. ಕ್ರೀಡೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ: ಕವಿತಾ ಕೆ.

Coastal Bulletin
ತುಂಬೆ: ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಂಘ ಉದ್ಘಾಟನೆ. ಕ್ರೀಡೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ: ಕವಿತಾ ಕೆ.

ಬಂಟ್ವಾಳ :ವಿದ್ಯಾರ್ಥಿ ಜೀವನ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಪುಸ್ತಕ ಓದುವುದಲ್ಲ ಅದು ವ್ಯಕ್ತಿತ್ವದ ಸಮಗ್ರ ವಿಕಾಸದ ಸಮಯ. ಶಿಕ್ಷಣ ನಮಗೆ ಜ್ಞಾನವನ್ನು ನೀಡಿದರೆ ಕ್ರೀಡೆ ನಮಗೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ.ಕ್ರೀಡಾಂಗಣದಲ್ಲಿ ಸಿಗುವ ಅನುಭವಗಳು ತರಗತಿಯಲ್ಲಿ ಸಿಗುವುದಿಲ್ಲ ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಈ ವಿದ್ಯಾ ಸಂಸ್ಥೆಯ ಕ್ರೀಡಾ ಸಂಘವು ನಿಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರತರಲು ಒಂದು ಉತ್ತಮ ವೇದಿಕೆಯಾಗಲಿ ಈ ವಿದ್ಯಾಸಂಸ್ಥೆಯಿಂದ ಉತ್ತಮ ಕ್ರೀಡಾಪಟುಗಳು ಮೂಡಿ ಬರಲಿ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಕೆ ಹೇಳಿದರು.

ಅವರು ತುಂಬೆ ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ  ಜಗದೀಶ್ ರೈ .ಬಿ ಇವರು

ಪ್ರಸ್ತಾವನೆಗೈದು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಾಯಿರಾಮ್ ನಾಯಕ್ ನಿರೂಪಿಸಿದರು. 

Leave a Comment