ಬ್ರಹ್ಮರಕೂಟ್ಲು: ಹಿಂದೂ ರುದ್ರಭೂಮಿ ಅಭಿವೃದ್ಧಿ, ವಿಜ್ಞಾಪನಾ ಪತ್ರ ಬಿಡುಗಡೆ.

Coastal Bulletin
ಬ್ರಹ್ಮರಕೂಟ್ಲು: ಹಿಂದೂ ರುದ್ರಭೂಮಿ ಅಭಿವೃದ್ಧಿ, ವಿಜ್ಞಾಪನಾ ಪತ್ರ ಬಿಡುಗಡೆ.

ಬಂಟ್ವಾಳ :ತಾಲೂಕಿನ ಕಳ್ಳಿಗೆಯ ಹಿಂದೂ ರುದ್ರಭೂಮಿಯ ನವೀಕರಣ ಕಾಮಗಾರಿಯ ಮುಂದಿನ ಕಾರ್ಯಯೋಜನೆಗಳ ಕುರಿತು ಮಹತ್ವದ ಸಭೆಯು ಅ.23 ಆದಿತ್ಯವಾರದಂದು ಬ್ರಹ್ಮರಕೂಟ್ಲುವಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಜರುಗಿತು.

ಸಭೆಯಲ್ಲಿ ರುದ್ರಭೂಮಿಯ ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಮುಂದುವರಿಸುವುದು ಹಾಗೂ ಅದಕ್ಕೆ ಅಗತ್ಯವಿರುವ ಆರ್ಥಿಕ ಕ್ರೋಡೀಕರಣದ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಈ ಬೃಹತ್ ಯೋಜನೆಗೆ ಅಗತ್ಯವಿರುವ ಧನಸಹಾಯವನ್ನು ಸಂಗ್ರಹಿಸುವ ಸಲುವಾಗಿ ಸಿದ್ಧಪಡಿಸಲಾದ ವಿಶೇಷ ‘ವಿಜ್ಞಾಪನ ಪತ್ರ’ವನ್ನು ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶಶಿಧರ್ ಬ್ರಹ್ಮರಕೂಟ್ಲು, ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ, ಕೋಶಾಧಿಕಾರಿ ಸುಧೀರ್ ಜಾರಂದಗುಡ್ಡೆ ಹಾಗೂ ಪ್ರಮುಖರಾದ ವಸಂತ ದಾರಿಬಾಗಿಲು, ಸಂತೋಷ್ ದೇವಂದಬೆಟ್ಟು, ಸುಂದರ ಗುಂಡಿ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಮನೋಹರ್ ಕಂಜತ್ತೂರು, ಜಗದೀಶ್ ಕಂಜತ್ತೂರು ಸೇರಿದಂತೆ ಊರಿನ ಹಿರಿಯರು ಮತ್ತು ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Comment