ಬಂಟ್ವಾಳ :ಜಿಸಿಐ ಇಂಡಿಯಾ , ಝೋನ್ 15ರ ವತಿಯಿಂದ ಆಯೋಜಿಸಲಾದ ಜಿ &ಡಿ ಕಾನ್ಫರೆನ್ಸ್ ಕಾರ್ಯಕ್ರಮವು ಜೆಸಿಐ ಮಡಂತ್ಯಾರ್ ಅವರ ಸಹಯೋಗದೊಂದಿಗೆ ಮಡಂತ್ಯಾರ್‌ನ ಕಲಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ, ಶೈಕ್ಷಣಿಕ ಸೇವೆ, ಸಮಾಜಮುಖಿ ಚಿಂತನೆ ಹಾಗೂ ಸಮರ್ಥ ನಾಯಕತ್ವವನ್ನು ಗುರುತಿಸಿ ಸಾಧಕರಿಗೆ ‘ಸಾಧನಶ್ರೀ ಪ್ರಶಸ್ತಿ’ ಪ್ರದಾನಿಸಲಾಯಿತು.
ಎಡುವೆಂಚರ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ ಅಮೃತ್ ರೈ ಯು. ಅವರು ಸಹಕಾರಿ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹಾಗೂ ಸಮಾಜಸೇವೆಯಲ್ಲಿ ಸಲ್ಲಿಸುತ್ತಿರುವ ವಿಶಿಷ್ಟ ಸೇವೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಗುರುತಿಸಿ, ಅವರಿಗೆ ‘ಸಾಧನಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು
ಮೂಡಿಸಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿಯೂ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದಾರೆ. ಅವರ ಕ್ರಿಯಾಶೀಲತೆ, ಸಂಘಟನಾ ಸಾಮರ್ಥ್ಯ, ನಾಯಕತ್ವದ ಗುಣ ಹಾಗೂ ಸಮಾಜದ ಮೇಲಿನ ಕಾಳಜಿಯನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವವನ್ನು ಪ್ರದಾನಿಸಲಾಯಿತು.
ಜೆಸಿಐ ಇಂಡಿಯಾ , ಝೋನ್ 15ರ ಇದರ ಬ್ಯುಸಿನೆಸ್ ಹಾಗೂ ಜಿ &ಡಿ ಕಾನ್ಫರೆನ್ಸ್ ಸಮಾರಂಭದಲ್ಲಿ ಝೋನ್ 15 ರ ಅಧ್ಯಕ್ಷರು,ಜೆಸಿಐ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಉಪಸ್ಥಿತರಿದ್ದರು.














