breaking news

ರಾಮಲ್ ಕಟ್ಟೆ : ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ.

Coastal Bulletin
ರಾಮಲ್ ಕಟ್ಟೆ : ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ.

ಬಂಟ್ವಾಳ: ತಾಲೂಕಿನ ತುಂಬೆ ರಾಮಲ್ ಕಟ್ಟೆಯ ಅರ್ಬನಗುಡ್ಡೆ ನಿವಾಸಿಯೊಬ್ಬರು ರಾಮಲ್ ಕಟ್ಟೆಯಲ್ಲಿ ತಾವು ನಡೆಸುತ್ತಿದ್ದ ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ನಾರಾಯಣ ಪೂಜಾರಿ (56)ಎಂದು ಗುರುತಿಸಲಾಗಿದೆ, ಮನೆಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಕ್ಯಾಂಟೀನ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಅವರು ಬಳಿಕ

ಕ್ಯಾಂಟೀನ್‌ನಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸಾಲದ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment