ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ.

Coastal Bulletin
ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ.

ಬಂಟ್ವಾಳ :ಮಡಂತ್ಯಾರಿನ ಕಲಾಸಭಾಂಗಣದಲ್ಲಿ ಭಾನುವಾರ ಮಡಂತ್ಯಾರು ಜೇಸಿ ಆಯೋಜಿಸಿದ ಜೇಸಿ ವಲಯ 15ರ ‘ಮೃದಿನಿ’ ಹೆಸರಿನಲ್ಲಿ ನಡೆದ ವ್ಯವಹಾರ ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ 2026ರಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯದ ಪದಾಧಿಕಾರಿಗಳಾದ ರಂಜಿತ್ ಎಚ್.ಡಿ,, ಸುಹಾಸ್ ಮರಿಕೆ, ಗಾಯತ್ರಿ ಲೋಕೇಶ್, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ,

ಜೋಡುಮಾರ್ಗ ನೇತ್ರಾವತಿ ಜೇಸಿಐ ಪೂರ್ವಾಧ್ಯಕ್ಷ ಪಿ.ಮಹಮ್ಮದ್, ಜೇಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷೆ ಕೀರ್ತಿ ಸತೀಶ್, ಮಡಂತ್ಯಾರು ಜೇಸಿಐ ಅಧ್ಯಕ್ಷೆ ಸಾಯಿಸುಮ ನಾವಡ ಸಹಿತ ಪ್ರಮುಖರು ಹಾಜರಿದ್ದರು..

Leave a Comment