ತುಂಬೆ :ಆಶೀರ್ವಾದ್ ಸೇವಾ ಸಂಘ  ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ.

Coastal Bulletin
ತುಂಬೆ :ಆಶೀರ್ವಾದ್ ಸೇವಾ ಸಂಘ  ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ.

ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ವತಿಯಿಂದ 11ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಬೊಳ್ಳಾರಿ ದಿವಂಗತ ಸೋಮಪ್ಪ ಪೂಜಾರಿ ಇವರ ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸಂಧರ್ಭದಲ್ಲಿ ಪರಿಸರದ ಸುತ್ತಮುತ್ತಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 500ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಬೆಳಗಿನಿಂದ ಮಧ್ಯಾಹ್ನದವರೆಗೆ ವೇದಿಕೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಂದ ನೃತ್ಯ, ಹಾಸ್ಯ, ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನದ ಬಳಿಕ ಕೆಸರು ಗದ್ದೆ ಯಲ್ಲಿ ಸಂಘದ ಸದಸ್ಯರಿಗೆ ವಿಶೇಷ ಆಟೋಟ ಸ್ಪರ್ಧೆಗಳು ನಡೆಯಿತು. ಬೆಳಗಿನಿಂದ ಸಂಜೆವರೆಗೆ ತುಳುನಾಡಿನ ವಿಶೇಷ ತೆನಸ್ ವನಸ್ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

ದಾಮೋದರ ನೆತ್ತೆರೆಕೆರೆ, ಜಯಪ್ರಕಾಶ್ ಜಕ್ರಿಬೆಟ್ಟು, ಉಮೇಶ್ ಶೆಟ್ಟಿ, ರಾಘವ ಬಂಗೇರ ಪೆರ್ಲಬೈಲ್, ಅಂಗನವಾಡಿ ಶಿಕ್ಷಕಿ ಪ್ರಭಾವತಿ ಭಾಗವಹಿಸಿದರು. ವೇದಿಕೆಯಲ್ಲಿ ಸಂಘದ ಗೌರವ ಸಲಹೆಗಾರರಾದ ದೇವಪ್ಪ ಗೌಡ ಬೊಳ್ಳಾರಿ, ನಾರಾಯಣ್ ಕಿರೋಡಿಯನ್ ಮುದಲ್ಮೆ, ಗೌರವಾಧ್ಯಕ್ಷರಾದ ಗಣೇಶ್ ಸುವರ್ಣ, ಅಧ್ಯಕ್ಷರಾದ ರಂಜಿತ್ ಬೊಳ್ಳಾರಿ, ಜಲಜಾಕ್ಷಿ ಕೋಟ್ಯಾನ್ ಮುದಲ್ಮೆ ಕಾರ್ಯದರ್ಶಿ ಪ್ರವೇಶ್ ಮುದಲ್ಮೆ, ಶೃತಿ ಬೊಳ್ಳಾರಿ ಸೇರಿದಂತೆ ಊರಿನ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶಾನ್ ಬೊಳ್ಳಾರಿ ಸ್ವಾಗತಿಸಿದರು, ಯೋಗೀಶ್ ಬೊಳ್ಳಾರಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment