Coastal Bulletin

ಬಂಟ್ವಾಳ: ಶ್ರೀ ದುರ್ಗಾ ಫ್ರೆಂಡ್ಸ್ ಕುರಿಯಾಳ ಇದರ ವತಿಯಿಂದ ದುರ್ಗಾನಗರದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ೧೫ ನೇ ವರ್ಷದ ಮೊಸರು ಕುಡಿಕೆ ಉತ್ಸವವು ಶುಕ್ರವಾರ ವಿಜ್ರಂಭಣೆಯಿಂದ ನಡೆಯಿತು.

ಬೆಳಿಗ್ಗೆ ಕ್ರೀಡಾಕೂಟ ಉದ್ಘಾಟನೆಗೊಂಡು ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮ್ಟಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೋಹಿನಿ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಅರ್ಚಕ ವೇ. ಮೂ. ಸುದರ್ಶನ ಬಲ್ಲಾಳ್, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಅಮ್ಟಾಡಿ ಗ್ರಾ.ಪಂ. ಸದಸ್ಯ ಹರೀಶ್ ಶೆಟ್ಟಿ ಪಡು, ಪತ್ರಕರ್ತ

ಸಂದೀಪ್ ಸಾಲ್ಯಾನ್, ಉದ್ಯಮಿ ರತ್ನಾಕರ ಪೂಜಾರಿ ಹೊಸಮಣ್ಣು, ಪ್ರದೀಪ್ ಮಾರ್ಲ, ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಹರೀಶ್ ಬಂಜನ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸಂತೋಷ್ ಸುವರ್ಣ ಪ್ರಧಾನ ಕಾರ್ಯದರ್ಶಿ ಸಂದೇಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಕುಶಾಲ್‌ರಾಜ್ ಪೂಜಾರಿ ಹಾಜರಿದ್ದರು.

ಸಹನಾ ಸ್ವಾಗತಿಸಿ, ಸಂದೀಪ್ ಕೋಟ್ಯಾನ್ ವಂದಿಸಿದರು. ಚೈತ್ರ ಶ್ರೀನಿಧಿ ಬಂಗೇರ ಕಾರ್ಯಕ್ರಮ ನಿರೂಪಿಸಿದರು

Leave a Comment