ಕನ್ನಡ ಚಿತ್ರಗಳು ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದ ಪ್ರೇಕ್ಷಕರ ಮನಸ್ಸನ್ನೂ ಗೆದ್ದೂ, 'ಪಾಪಾ ಪಾಂಡು'ವಿನಂತಹ ಹಾಸ್ಯಮಯ ಧಾರಾವಾಹಿಯಲ್ಲಿ ಬಾಸ್ ಬಾಲ್ ರಾಜ್ ಎಂದೇ ಖ್ಯಾತರಾಗಿದ್ದ ಹಿರಿಯ ಹಾಸ್ಯ ಕಲಾವಿದ, ಪೋಷಕ ನಟ ಶಂಕರ್‌ರಾವ್ ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು ಬೆಳಗಿನ ಜಾವ ಸುಮಾರು 6.30ರ ಸಮಯದಲ್ಲಿ ತಮ್ಮ ಅರಕೆರೆಯ ನಿವಾಸದಲ್ಲಿ ತೀರಿಕೊಂಡಿದ್ದಾರೆ. 'ಪಾಪ ಪಾಂಡು' ಧಾರಾವಾಹಿ ಪಾತ್ರದಿಂದ ಹಿಡಿದು 'ಧ್ರುವ' ಚಿತ್ರದ
ಸಾಧುಕೋಕಿಲಾ ಜೊತೆಗಿನ ಫೇಮಸ್ ದೃಶ್ಯದ ಲೆಕ್ಚರರ್ ಪಾತ್ರದವರೆಗೂ ಜನಪ್ರಿಯತೆ ಗಳಿಸಿದ್ದರು. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಶಂಕರ್‌ರಾವ್ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದು, 'ನಟರಂಗ' ತಂಡದೊಟ್ಟಿಗೆ ಗುರುತಿಸಿಕೊಂಡಿದ್ದರು.














