ಮಂಗಳೂರು :ಮಲ್ಲೂರಿನ ಸಮಾಜಮುಖಿ ಸೇವಾ ಸಂಸ್ಥೆ ಬದುಕಿಗೊಂದು ಆಸರೆ (ರಿ) ಇದರ ಉದ್ಘಾಟನಾ ಸಮಾರಂಭ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮ ಮಲ್ಲೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ, ರಾಮಕೃಷ್ಣ ತಪೋವನ, ಪೊಳಲಿ ಆರ್ಶೀವಚನ ನೀಡಿದರು. ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಲ್ಲೂರಿನ ಬಡ ಕುಟುಂಬ ವೊಂದಕ್ಕೆ ಆರ್ಥಿಕ ಸಹಕಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗಣ್ಯರಾದ ಪುರುಷೋತ್ತಮ ಕೊಟ್ಟಾರಿ,ಡಾ.ಹಂಸರಾಜ ಆಳ್ವ, ಉಮೇಶ್ ಸಾಲಿಯಾನ್, ,ಬಿಲ್ಲವ ಬ್ರಿಗೇಡ್ ನ ಕೇಂದ್ರೀಯ ಮಂಡಳಿಯ ಸ್ಥಾಪಕಾಧ್ಯಕ್ಷ ರಾದ ಅವಿನಾಶ್ ಸುವರ್ಣ, ಮಲ್ಲೂರು
ಪಂಚಾಯತ್ ಸದಸ್ಯೆ ಸುಮಾ ಶೆಟ್ಟಿ ,ಪ್ರಕಾಶ್ ಆಳ್ವ ಪರಾರಿ, ಪ್ರಕಾಶ್ ಕೋಟ್ಯಾನ್ ಮಲ್ಲೂರು ಬದುಕಿಗೊಂದು ಆಸರೆ (ರಿ) ಮಲ್ಲೂರು ಇದರ ಗೌರವಾಧ್ಯಕ್ಷರಾದ ಪ್ರದೀಪ್ ನಾಯ್ಕ್ ದೆಮ್ಮಲೆ ಅಧ್ಯಕ್ಷರಾದ ಲಕ್ಷಣ ಆಚಾರ್ಯ ಮಲ್ಲೂರು, ಉಪಾಧ್ಯಕ್ಷರಾದ ಶ್ರೀನಾಥ್ ಕುಲಾಲ್, ಪ್ರಧಾನ ಕಾರ್ಯದರ್ಶಿಯಾದ ಜಗದೀಶ್ ಬದ್ರೀಯಾನಗರ ಉಪಸ್ಥಿತಿ ಇದ್ದರು. ಸೋಹನ್ ಆಳ್ವ ಸ್ವಾಗತಿಸಿದರು, ಜಗದೀಶ್ ಬದ್ರೀಯಾನಗರ ಧನ್ಯವಾದಗೈದರು ಯಶವಂತಿ ಕಜೆ ಕಾರ್ಯಕ್ರಮ ನಿರೂಪಿಸಿದರು.














