ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ಟಾಳ ತಾಲೂಕು ತುಂಬೆ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಅ.15ನೇ ಬುಧವಾರ ಬೆಳಿಗ್ಗೆ ತುಂಬೆ ಗ್ರಾ ಪಂ ಕಛೇರಿ ಬಳಿ ಉದ್ಘಟನೆಗೊಂಡಿತು. ಬಳಿಕ ವೈದ್ಯಧಿಕಾರಿಗಳ 3 ತಂಡಗಳನ್ನು ಮಾಡಿ15 ಕಡೆಗಳಲ್ಲಿ ಶಿಬಿರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಬಿ ತುಂಬೆ ಸದಸ್ಯರಾದ ಇಬ್ರಾಹೀಂ ವಳವೂರು, ಮಹಮ್ಮದ್ ಝಹೂರ್ , ಅರುಣ್ ಕುಮಾರ್ , ಜಯಂತಿ ನಾಗೇಶ್, ಪಶು
ವೈದ್ಯಧಿಕಾರಿ ಡಾ. ಕಾರ್ತಿಕ್ ಹಾಗೂ ಸಿಬ್ಬಂದಿ ವರ್ಗ,ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವುಲಾಲ್ ಚವ್ಹಾಣ್ , ದ್ವೀತಿಯ ದರ್ಜೆ ಲೆಕ್ಕ ಸಹಾಯಕಿ ಚಂದ್ರಕಲಾ ಜಿ, ಪಂಚಾಯತ್ ಸಿಬ್ಬಂದಿ ವರ್ಗ , ಪಶುಸಖಿ ಬಬಿತ ,ಎಲ್ ಸಿ ಆರ್ ಪಿ ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.
















