Coastal Bulletin

ಬಂಟ್ವಾಳ :ಶ್ರೇಯಾ ಕುಮಾರಿ ನಡುಬೈಲ್ ಇವರಿಗೆ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್ ಕರ್ನಾಟಕ ಏರ್ಪಡಿಸಿದ ಲ್ಯಾಬ್ ಟೆಕ್ನಿಷ್ಯನ್ ಪರೀಕ್ಷಾ ವಿಭಾಗದಲ್ಲಿ ರಾಜ್ಯಕ್ಕೆ 7 ನೇ ರಾಂಕ್ ನಲ್ಲಿ ಉತ್ತೀರ್ಣ ರಾಗಿರುತ್ತಾರೆ , ಇವರು ಆಳ್ವಾ ಸ್ ಕಾಲೇಜು ಮೂಡಬಿದ್ರಿ ಇಲ್ಲಿನ ವಿದ್ಯಾರ್ಥಿನಿ.

ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್ ಬೆಂಗಳೂರು* ಇದರ ಅಡಿಯಲ್ಲಿ ನಡೆದ ಬಿ ಎಸ್ ಸಿ, ಎಂ ಎಲ್ ಟಿ ಪದವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡು ನಾಡಿಗೆ ಕೀರ್ತಿಯನ್ನು ತಂದಿದ್ದಾಳೆ.

ಈಕೆ ದ.ಕ.ಜಿಲ್ಲೆ, ಬಂಟ್ವಾಳ ತಾಲೂಕಿನ ಪುದು ಗ್ರಾಮದ ಹೊಯಿಗೆಗದ್ದೆ, ನಡುಬೈಲು ನಿವಾಸಿ ಸುರೇಶ್ ಪೂಜಾರಿ ಹಾಗೂ ಭವಾನಿ ದಂಪತಿಯ ಪುತ್ರಿ, ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ, ನೆತ್ತರಕೆರೆ. ಹೈಸ್ಕೂಲ್ ಹಾಗೂ ಪದವಿ ಪೂರ್ವ ವಿಧ್ಯಾಬ್ಯಾಸವನ್ನು ಜೈನ್ ಹೈಸ್ಕೂಲ್ ಮೂಡುಬಿದಿರೆ ಮಾಡಿದರು. ಇವರು 2015-16 ರಲ್ಲಿ ನಡೆದ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 596 (95.36 % )ಅಂಕವನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ .

ಪಾಠಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಉತ್ತಮ ಸಾಧನೆ ಮಾಡುತ್ತಿರುವ ಇವರು ,ಭಾಷಣ,ಪ್ರಬಂಧ, ಆಶುಭಾಷಣ,ಚರ್ಚಾ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಪ್ರಸ್ತುತ ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇಲ್ಲಿ ಎಂ ಎಸ್ ಸಿ, ಎಂ ಎಲ್ ಟಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಈಕೆ,ಕನ್ನಡ ಮಾಧ್ಯಮದಲ್ಲಿ ಕಲಿತು ಹಳ್ಳಿ ಹುಡುಗಿಯೊಬ್ಬಳು ಕಠಿಣ ಪರಿಶ್ರಮ, ಶ್ರದ್ದೆ, ಏಕಾಗ್ರತೆಯಿಂದ ಈ ಸಾಧನೆ ಮಾಡಿರುವುದು ಸಮಾಜಕ್ಕೆ ಪ್ರೇರಣೆ ಯಾಗಿದೆ.

Leave a Comment