Coastal Bulletin

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ಸನ್ನಿಧಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗ ತಕ್ಷಣದಿಂದ ನಿಷೇಧ ಮಾಡಿ ಸರಕಾರ ಅದೇಶ ಹೊರಡಿಸಿದೆ.

ಕಾರಿಂಜ ದೇವಾಲಯದ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ದೇವಸ್ಥಾನಕ್ಕೆ ಹಾನಿಯಾಗುತ್ತಿದೆ ಎಂಬುದು ಅರೋಪವಾಗಿದ್ದು, ಇದರ ವಿರುದ್ಧ ಪ್ರಮುಖವಾಗಿ ಹಿಂ ಜಾ ವೇ ಪ್ರತಿಭಟನೆ,ಹೋರಾಟಗಳನ್ನು ನಿರಂತರವಾಗಿ ನಡೆಸಿತ್ತು.ಅದರೆ ಇದೀಗ ಸರಕಾರ ಗಣಿಗಾರಿಕೆ ಗೆ ನಿಷೇಧದ ಅದೇಶ ಮಾಡಿದೆ.ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 8(3) ರಲ್ಲಿ ಪ್ರದವಾಗಿರುವ ಅಧಿಕಾರವನ್ನು ಚಲಾಯಿಸಿ ಸರ್ಕಾರವು ದಕ್ಷಿಣ ಕನ್ನಡ ಜಿಲೆ, ಬಂಟ್ವಾಳ ತಾಲೂಕು, ಕಾವಳಮುರು ಗ್ರಾಮದ ವ್ಯಾಪ್ತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ 02 ಕಿಲೋ ಮೀಟರ್ ಸುತ್ತಳತೆಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯಿರಿಸಿ, ಸದರಿ ಸ್ಥಳದ 02 ಕಿಲೋ ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ, ಎಲ್ಲಾ ರೀತಿಯ

ಗಣಿಗಾರಿಕ ಮತ್ತು ಕಲ್ಲುಪುಡಿ (ಕುವ‌ ಚಟುವಟಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತ ಹಾಗೂ ಮುಂದಿನ ಆದೇಶದವರೆಗೆ ನಿಷೇಧಿಸಿದೆ. ಎಂಬ ಅದೇಶ ಹೊರಡಿಸಿದೆ.

ಈ ಸಂದರ್ಭದಲ್ಲಿ ಹಿಂ ಜಾ ವೇ ಬಂಟ್ವಾಳ ಅಧ್ಯಕ್ಷರಾದ ತಿರುಲೇಶ್ ಬೆಳ್ಳೂರು ಇವರನ್ನು ಸಂಪಕಿಸಿದಾಗ, ಹಿಂ ಜಾ ವೇ ಯು ನಿರಂತರವಾಗಿ  ಹೋರಾಟ ನಡೆಸಿದ ಫಲವಾಗಿ ಇವತ್ತು ಜಯ ಸಿಕ್ಕಿದೆ , ಈ ಸಂದರ್ಭದಲ್ಲಿ ದಲ್ಲಿ ನಮಗೆ ಬೆಂಬಲಿಸಿದ ಶಾಸಕರಾದ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ, ಅದೇ ರೀತಿ ಈ ಹೋರಾಟದಲ್ಲಿ ಪಾಲ್ಗೊಂಡ ಸಂಘ ಪರಿವಾರದ ನಾಯಕರುಗಳಿಗೆ,ಎಲ್ಲಾ ಹಿಂ ಜಾ ವೇ ಕಾರ್ಯಕರ್ತರಿಗೆ, ಭಕ್ತರಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Leave a Comment