Coastal Bulletin

ಬಂಟ್ವಾಳ :ಮಾ.13 ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ - 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ" ಜಲ್ ಜೀವನ್ ಮಿಷನ್ " ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ,ಮಂಚಿ ಗ್ರಾಮ ಪಂಚಾಯತ್ ನಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ತರಭೇತಿಯನ್ನು ಆಯೊಜಿಸಲಾಗಿತ್ತು.

ಈ ತರಭೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು , ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ,ನೀರು ಘಂಟಿ ಗಳು‌ ಹಾಗು ಪಂಚಾಯತ್ ಸಿಬ್ಬಂದಿಗಳು

ಸೇರಿ ಒಟ್ಟು 21 ಜನರು ಭಾಗವಹಿಸಿದ್ದರು.

ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬಂಟ್ವಾಳ ತಾಲೂಕಿನ ಸಮುದಾಯ ಸಂಘಟಕರಾದ ಗುಣವತಿ ಹಾಗೂ ವಿಲ್ಮಾ ರವರು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದರು

Leave a Comment