ಕಾಸರಗೋಡು: ಪೈವಳಿಕೆ ಬಾಯಿಕಟ್ಟೆ ಕೋರಿಕ್ಕಾರ್ ಮೂಲದ ಮಾಜಿ ಗುಮಾಸ್ತ, ಪ್ರಗತಿಪರ ಕೃಷಿಕ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮೃತಪಟ್ಟ ಘಟನೆ ಆ.4ರಂದು ಸೋಮವಾರ ಸಂಜೆ ನಡೆದಿದೆ, ಮಹಾಬಲ ಟಿ (74) ಮೃತಪಟ್ಟ ದುರ್ದೈವಿ.
ಇವರು ಬಾಯಾರ್ ನಿಂದ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದರು.ಈ ಮಧ್ಯೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಉಪ್ಪಳದ ಖಾಸಗಿ
ಆಸ್ಪತ್ರೆಗೆ ಕರೆದೊಯ್ಯಲಾಯಿತದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಗಂಡು,ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.














