ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಆಚರಣೆಯ ಪೂರ್ವಸಿದ್ಧತಾ ಸಭೆ

Coastal Bulletin
ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಆಚರಣೆಯ ಪೂರ್ವಸಿದ್ಧತಾ ಸಭೆ

ಬಂಟ್ವಾಳ :ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ), ತುಂಬೆ ಮತ್ತು ಶ್ರೀ ಶಾರದಾ ರಜತ ಮಹೋತ್ಸವ ಸಮಿತಿಯ ವತಿಯಿಂದ ಶಾರದಾ ರಜತ ಮಹೋತ್ಸವದ ಆಚರಣೆಯ ಬಗ್ಗೆ ಪೂರ್ವ ಸಿದ್ದತಾ ಸಭೆಯು ಆ.3ರಂದು ಆದಿತ್ಯವಾರ ಜರುಗಿತು.

ಶ್ರೀ ಶಾರದಾ ರಜತ ಮಹೋತ್ಸವದ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಸ್ತ್ರತ ಸಭಾಭವನದ ನಿರ್ಮಾಣ ಕಾರ್ಯದ ವಿವರಗಳನ್ನು ಹಾಗೂ ಶಾರದಾ ಉತ್ಸವದ ಕುರಿತು ಮಾಹಿತಿ ಹಂಚಿಕೊಂಡರು. ಕಾರ್ಯಕರ್ತರಿಂದ ಹಲವು ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಶಾರದಾ ರಜತ ಮಹೋತ್ಸವ ಹಾಗೂ ಸಭಾ

ಭವನದ ಉದ್ಘಾಟನಾ ಕಾರ್ಯಕ್ರಮವು ಸೆ. 27- 30ರವರೆಗೆ ನಡೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. 

ಈ ಸಂದರ್ಭದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಮತ್ತು ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ತುಂಬೆ ಇದರ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment