ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ.

Coastal Bulletin
ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ.

ಬಂಟ್ವಾಳ :ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ)ಬಂಟ್ವಾಳ, ಪೊಲೀಸ್ ಇಲಾಖೆ ಬಂಟ್ವಾಳ, ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಇವರ ಸಂಯುಕ್ತ ಅಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವು ಜು 31ರಂದು ಸೋಮವಾರ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಶೇಖರ ವೈ ತಳವಾರ, ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಜೆ ಎಮ್ ಎಫ್ ಸಿ ಬಂಟ್ವಾಳ ಹಾಗೂ ಸದಸ್ಯ ಕಾರ್ಯದರ್ಶಿ,ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ರಂಗನಾಥ್ ಭಟ್, ಗೌರವ ಕಾರ್ಯದರ್ಶಿ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಮಂಗಳೂರು. ಇವರು ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಚಂದ್ರಶೇಖರ, ಕಾರ್ಯದರ್ಶಿ ವಕೀಲರ ಸಂಘ ರಿ ಬಂಟ್ವಾಳ, ಹರಿಣಿ ಕುಮಾರಿ ಡಿ, ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿ, ತಾಲೂಕು

ಕಾನೂನು ಸೇವೆಗಳ ಸಮಿತಿ ಬಂಟ್ವಾಳ. ಮೂರ್ತಿ, ಉಪನಿರಿಕ್ಷಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಡಾ ಗಣೇಶ್ ವಿ ಭಟ್, ಪ್ರಾಚಾರ್ಯರು, ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜಾನಪದವು, ಡಾ ಪ್ರಿಯಾ ವಿ ಫ್ರ್ಯಾಂಕ್, ಡೀನ್ ಸ್ಟೂಡೆಂಟ್ ವೆಲ್ಫೇರ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಪದ್ಮನಾಭ ಎಸ್, ವಕೀಲರು ಬಂಟ್ವಾಳ ಇವರು "ಮಾನವ ಕಳ್ಳ ಸಾಗಾಣಿಕೆ" ತಡೆಗಟ್ಟುವ ಬಗ್ಗೆ ಕಾನೂನು ಮಾಹಿತಿ ನೀಡಿದರು.

ಸಹ ಪ್ರಧ್ಯಾಪಕರಾದ ಕ್ಯಾರಲ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Leave a Comment