ಜಾರ್ಜ್ ಗೆ ಹಾಕಿದ್ದ ಮೊಬೈಲ್ ಜಾರ್ಜರ್ ವೈರ್ ಅನ್ನು ಬಾಯಲ್ಲಿಟ್ಟುಕೊಂಡು ವಿದ್ಯುತ್ ಪ್ರವಹಿಸಿ ಮಗು ಮೃತಪಟ್ಟಿದೆ.
ಪೋಷಕರು ಮೊಬೈಲ್ ಜಾರ್ಜ್ ಮಾಡಿ, ಅದನ್ನು ಅದನ್ನು ಆಫ್ ಮಾಡದೇ ಹಾಗೇ ಬಿಟ್ಟಿದ್ದರಿಂದ, ಪಕ್ಕದಲ್ಲೇ ಆಟವಾಡುತ್ತಿದ್ದ ೮ ತಿಂಗಳ ಮಗು, ಮೊಬೈಲ್ ಜಾರ್ಜರ್ ವೈರ್ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ.
ಇದರಿಂದ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಮಗು 8 ತಿಂಗಳ ಹಸುಗೂಸಾಗಿದೆ.















