ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಶ್ವಾಸಕೋಶದ ಕ್ಯಾನ್ಸರ್

Coastal Bulletin
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಶ್ವಾಸಕೋಶದ ಕ್ಯಾನ್ಸರ್

ಇತ್ತೀಚಿನ ವರ್ಷದಲ್ಲಿ ಕರ್ನಾಟಕದಲ್ಲಿ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಪುರುಷರಲ್ಲಿ ಸಂಭವಿಸುತ್ತಿರುವ ಕ್ಯಾನ್ಸರ್ ಸಾವುಗಳಲ್ಲಿ ಶೇ.12.05ರಷ್ಟು ಮತ್ತು ಮಹಿಳೆಯರಲ್ಲಿ ಶೆ.8.9ರಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ ಮಾಡುವ ಪುರುಷರಲ್ಲಿ ಬರುತ್ತದೆ. ಆದರೆ ಧೂಮಪಾನಿಗಳಲ್ಲದವರಲ್ಲಿ ಹಾಗೇ ಮಹಿಳೆಯರಲ್ಲಿ ಈ ಪ್ರಕರಣಗಳ ವರದಿ ಹೆಚ್ಚಾಗಿ ಕಾಣಸಿಗುತ್ತದೆ. ಭಾರತೀಯ ಕ್ಯಾನ್ಸರ್ ಸೊಸೈಟಿ ಸಂಶೋಧನೆ ವರದಿ ತಿಳಿಸುವಂತೆ ಕಳೆದ ಐದು ತಿಂಗಳಲ್ಲಿ ಶೆ.20ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್ ಕಂಡುಬರುತ್ತಿದೆ ಎಂದು ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆಯ ಪಾಲ್ಮೊನಾಲೊಜಿ ನಿರ್ದೇಶಕ ಡಾ.ವಿವೇಕ್ ಆನಂದ್ ಪದಗಲ್ ಹೇಳಿದ್ದಾರೆ. 

2021ರಲ್ಲಿ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಅಂದಾಜು

ಪ್ರಮಾಣವು ಪರುಷರಲ್ಲಿ  109,೦೦೦ಪ್ರಕರಣಗಳು ಮತ್ತು ಮಹಿಳೆಯರಲ್ಲಿ 45,೦೦೦ ಪ್ರಕರಣಗಳು ದಾಖಲಾಗುತ್ತಿವೆ. ಭಾರತದಲ್ಲಿ ಶ್ವಾಸಕೋಸದ ಕ್ಯಾನ್ಸರ್ ಪ್ರಮಾಣವು ಲಕ್ಷ ಜನರಲ್ಲಿ ಶೇ. 6.9ಮಂದಿಗೆ ಬರುತ್ತಿದೆ. ಆದರೆ, ಈ ಪ್ರಮಾಣ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸ ಕಂಡು ಬರುತ್ತಿದೆ. ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಇರುವ ರಾಜ್ಯಗಳು ಎಂದರೆ ಮಿಜೋರಾಂ, ಕೇರಳ ಮತ್ತು ಮಣಿಪುರ ಎಂದು ವೈದ್ಯರು ಮಾಹಿತಿಯನ್ನು ನೀಡಿದ್ದಾರೆ. 


Leave a Comment