Coastal Bulletin

ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದಡಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಎಂದು ಜಿಲ್ಲಾ ಎಸ್ಪಿ ಸಿ.ಬಿ.ವೇದಮೂರ್ತಿ ಅದೇಶ ಹೊರಡಿಸಿದ್ದಾರೆ.ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವೀರೇಶ್, ಸಂತೋಷ್ ಮತ್ತು ಮೆಹಬೂಬ್ ಎಂಬುವರು ಅಮಾನತುಗೊಂಡ ಪೇದೆಗಳು.

ಯಾದಗಿರಿಯ ಯರಗೋಳ್ ನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಬಿಗಿ ಬಂದೋಬಸ್ತ್ ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯದಲ್ಲಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ತಡೆದಿಲ್ಲ. ಜತೆಗೆ, ಬಂದೂಕುಗಳನ್ನು ಸಹ

ಜಪ್ತಿ ಮಾಡಿಲ್ಲ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೂವರು ಪೇದೆಗಳನ್ನು ಅಮಾನತುಗೊಳಿಸಿದ್ದಾರೆ.ಜೊತೆಗೆ ಅನುಮತಿ ಇಲ್ಲದಿದ್ದರೂ, ಬೈಕ್ ರ್ಯಾಲಿ ನಡೆಸಿರುವ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.

Leave a Comment