Coastal Bulletin

ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ-ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇವರಿಂದ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ.

ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ಪೆರುವಾಯಿ ಗ್ರಾಮದ ಅಶ್ವಥನಗರ ನಿವಾಸಿ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ

ಸಹೃದಯಿ ಹಿಂದೂ ಬಾಂಧವರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರದ ಸರಳ ಕಾರ್ಯಕ್ರಮವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಇಂದು ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳ ಶುಭಾಶೀರ್ವಾದದಿಂದ ನಡೆಯಿತು.

Leave a Comment