Coastal Bulletin

ಮಂಗಳೂರು: ಅನಿವಾಸಿ ಭಾರತೀಯರಿಗೆ ಉಚಿತ ಲಸಿಕಾ ಕಾರ್ಯಕ್ರಮ

ಮಂಗಳೂರು: ಅನಿವಾಸಿ ಭಾರತೀಯರಿಗೆ ಉಚಿತ ಲಸಿಕಾ ಕಾರ್ಯಕ್ರಮ


ಮಂಗಳೂರು: ದ‌.ಕ.ಜಿಲ್ಲೆಯ ಅನಿವಾಸಿ ಭಾರತೀಯರಿಗೆ ನಗರದ ಕೊಡಿಯಾಲಬೈಲ್ ನಲ್ಲಿರುವ ಕೆನರಾ ಪ್ರೌಢಶಾಲೆಯಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ.


ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ದ.ಕ.ಜಿಲ್ಲಾಡಳಿತದ ವತಿಯಿಂದ ಈ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲ ಹಂತದಲ್ಲಿ 500 ಮಂದಿ ಅನಿವಾಸಿ ಭಾರತೀಯರಿಗೆ ಕೋವಿಶೀಲ್ಡ್

ಲಸಿಕೆಯನ್ನು ನೀಡಲಾಗುತ್ತಿದೆ. ಬೆಳಗ್ಗೆ 9ರಿಂದ ಸಂಜೆಯವರೆಗೆ ಲಸಿಕೆಯನ್ನು ನೀಡಲಾಗುತ್ತದೆ.


ದ.ಕ.ಜಿಲ್ಲೆಯ ಅನಿವಾಸಿ ಭಾರತೀಯರಿಗೆ ಮಾತ್ರ ಈ ಲಸಿಕೆಯನ್ನು ಒದಗಿಸಲಾಗುತ್ತಿದೆ. ಲಸಿಕೆ ಪಡೆಯಲು ಬರುವವರು ಮಾನ್ಯತೆ ಇರುವ ವೀಸಾ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ದಾಖಲೆಯಾಗಿ ತೋರಿಸಬೇಕು. ಅಲ್ಲದೆ dk.nic.inನಲ್ಲಿ ರೆಜಿಸ್ಟ್ರೇಶನ್ ಮಾಡಿದವರಿಗೆ ಜಿಲ್ಲಾಡಳಿತದ ವತಿಯಿಂದಲೇ ದೂರವಾಣಿ ಕರೆ ಮಾಡಿ, ಲಸಿಕೆ ಪಡೆಯಲು ಸೂಚನೆ ನೀಡಲಾಗುತ್ತದೆ.

Leave a Comment