ಮಂಗಳೂರು: ಬುಡಸಹಿತ ಧರಾಶಾಯಿಯಾದ ಬೃಹತ್ ಮರ
ಮಂಗಳೂರು: ಬುಡಸಹಿತ ಧರಾಶಾಯಿಯಾದ ಬೃಹತ್ ಮರ
ಮಂಗಳೂರು: ಬೃಹತ್ ದೇವದಾರು ಮರವೊಂದು ಇಂದು ಬೆಳಗ್ಗೆ 8.30 ಸುಮಾರಿಗೆ ಬುಡಸಹಿತ ಧರೆಗೆ ಉರುಳಿ ಬಿದ್ದ ಘಟನೆ ನಗರದ ಉರ್ವದಲ್ಲಿರುವ ಕೊರಗಜ್ಜನ ಗುಡಿಯ ಸಮೀಪ ನಡೆದಿದೆ.
ಮರವು ಬುಡ ಸಹಿತ ಉರುಳಿ ಹೈಟೆನ್ಷನ್ ವಿದ್ಯುತ್ ತಂತಿಯ ಮೇಲೆಯೇ ಬಿದ್ದಿದೆ. ಪರಿಣಾಮ ವಿದ್ಯುತ್ ತಂತಿಗೆ ಹಾನಿಯಾಗಿದೆ. ಅಲ್ಲದೆ ಮರದಡಿಯಲ್ಲಿ ಒಂದು
ಟೆಂಪೊ, ಒಂದು ರಾಯಲ್ ಎನ್ ಫೀಲ್ಡ್ ಬೈಕ್ ಇದ್ದು, ಯಾವುದೇ ಹಾನಿಯಾಗಿಲ್ಲ. ತಕ್ಷಣ ಮೆಸ್ಕಾಂವನರು, ಅಗ್ನಿಶಾಮಕ ದಳದವರು ಆಗಮಿಸಿ ಮರವನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ನಗರದಲ್ಲಿ ಯಾವುದೇ ಗಾಳಿ ಮಳೆಯಿಲ್ಲದಿದ್ದರೂ ಮರವು ಬುಡ ಸಹಿತ ಉರುಳಿ ಬಿದ್ದಿರೋದು ಅಚ್ಚರಿ ತಂದಿದೆ. ರಸ್ತೆ ಅಭಿವೃದ್ಧಿಗಾಗಿ ಮಾಡುವ ಕಾಂಕ್ರಿಟೀಕರಣವೇ ಮರಗಳ ಅವಸಾನಕ್ಕೆ ಕಾರಣವಾಗುತ್ತಿದೆ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.















