ಹೊಸ ವರ್ಷ ಅಂದರೆ ಸಾಕು ಮನಸ್ಸಿನಲ್ಲಿ ಅದೇ ಏನೋ ಹೊಸ ನಿರೀಕ್ಷೆ ಮತ್ತು ಭರವಸೆ. ಇಂದು 2022ಕ್ಕೆ ವಿದಾಯ ಹೇಳಿ 2023ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳ ಜೊತೆಗೆ ಜೀವನದಲ್ಲಿ ಆದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ವರುಷಕ್ಕೆ ಕಾಲಿಡುವ ಸುಂದರ ಕ್ಷಣ ಇದು.
ಹೊಸ ವರ್ಷ ಎಂದರೆ ಖಾಲಿ ಇರುವ ಒಂದು ಪುಸ್ತಕದಂತೆ, ಅದರಲ್ಲಿ ಸುಂದರ ಕತೆಗಳನ್ನು ಬರೆಯುತ್ತಾ ಹೋದರೆ ಆ ಪುಸ್ತಕದಲ್ಲಿರುವ ಕತೆಗಳೂ ಎಂದೆಂದಿಗೂ ಮನಸ್ಸಿನಿಂದ ಮಾಸಲ್ಲ. ಮತ್ತೆ ನಮಗೆ 365 ದಿನಗಳು ಸಿಗುತ್ತಿವೆ. ಈ ದಿನಗಳನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿಂತಿದೆ ಎಂದರೆ ತಪ್ಪಾಗಲಾರದು. ಈ ವರ್ಷದಲ್ಲಿ ಕಳೆದ
ವರ್ಷದತ್ತ ಒಮ್ಮೆ ತಿರುಗಿ ನೋಡುವುದು ಕೂಡಾ ಮುಖ್ಯ. ಯಾಕೆಂದರೆ ಮುಂದೆ ಜೀವನದಲ್ಲಿ ಯಾವ ರೀತಿ ಹೆಜ್ಜೆ ಇಡಬೇಕು ಎಂದು ಅರಿವು ಆಗುತ್ತದೆ.
ಈ ಕ್ಷಣದಲ್ಲಿ 2022 ರಲ್ಲಿ ಆದ ಜೀವನದಲ್ಲಿ ಆದ ಅನುಭವವನ್ನು ನೆನೆಯುತ್ತಾ , ಉಳಿಸಿಕೊಂಡಿರುವ ಸ್ನೇಹ, ಸಂಬಂಧಗಳೆಲ್ಲ ನಮ್ಮ ಜೊತೆಗೆ ಸದಾ ಹೀಗೆ ಇರಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.














