ಬಾಲಿವುಡ್ ನ 'ಪರ್ಫೆಕ್ಷನಿಸ್ಟ್' ನಟ ಅಮೀರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡುತ್ತಿದ್ದಾರೆ.
ಕಿರಣ್ ರಾವ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ‘ಲಗಾನ್’ ಚಿತ್ರದ ಸೆಟ್‌ನಲ್ಲಿ ಭೇಟಿಯಾದ ಅವರಿಬ್ಬರು, ಡಿಸೆಂಬರ್ 28, 2005 ರಂದು ಪ್ರೀತಿಸಿ ಮದುವೆಯಾದರು. 2011 ರಲ್ಲಿ ಬಾಡಿಗೆ ತಾಯಿಯ ಮೂಲಕ ಅಜಾದ್ ಜನಿಸಿದ್ದ.ಅಮೀರ್
ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ಮದುವೆಯಾಗಿ 16 ವರ್ಷಗಳ ನಂತರ 2002 ರಲ್ಲಿ ವಿಚ್ಛೇದನ ಪಡೆದಿದ್ದರು. ರೀನಾ ಅವರಿಂದ ಅಮೀರ್‌ಗೆ ಐರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳಿದ್ದಾರೆ.















