Coastal Bulletin

ನವದೆಹಲಿ: ಪ್ರಧಾನಿ ಮೋದಿ ಅವರ ಅಮೆರಿಕದ ಅಧಿಕೃತ ರಾಜ್ಯ ಭೇಟಿಯ ಸಮರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ನಂತರ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆರ್ಶಿವಾದ ಪಡೆದರು.

38  ವರ್ಷ ಮೇರಿ ಮಿಲ್ಬೆನ್ ಅವರು ವಾಷಿಂಗ್ವನ್ ಡಿ.ಸಿಯಲ್ಲಿನ ರೊನಾಲ್ಡ್ ರೇಘನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟ್ ಫೌಂಡೇಶನ್ ಆಯೋಜಿಸಿದ್ದ ಆಹ್ವಾನ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆ ಹಾಡಿದ್ದಾರೆ. 

ಆಫ್ರಿಕನ್-

ಅಮೇರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ, ಮೇರಿ ಮಿಲ್ಬೆನ್ ಅವರು ಭಾರತದಲ್ಲಿ ಈಗಾಗಲೇ ಜನಪ್ರಿಯರು.  ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಗೀತೆಗಳ ಗಾಯನದಿಂದ ಭಾರತದಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. 


Leave a Comment