Coastal Bulletin

ನಟಿ ಖುಷ್ಬೂ ಸುಂದರ್ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಇದರಿಮದ ಅವರು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದ ಏಪ್ರಿಲ್ ಮೊದಲವಾರದಲ್ಲಿ ಅನಾರೋಗ್ಯದಿಂದ ನಟಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಮತ್ತೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪೋಸ್ಟ್ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ತಮ್ಮ ಅನಾರೋಗ್ಯದ ಕುರಿತಾಗಿ ಟ್ವಿಟ್ ಮಾಡಿರುವ ನಟಿ, ತಾವು ಟೇಲ್ ಬೋನ್ ಚಿಕಿತ್ಸೆ

ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ನಟಿ ಖುಷ್ಬೂ ಅವರನ್ನು ಈ ಸಮಸ್ಯೆ ಕಾಡಿತ್ತು. ಇದೀಗ ಅದೇ ಸಮಸ್ಯೆಗಳು ಮತ್ತೆ ಎದುರಾಗಿದ್ದು ಅದರ ಚಿಕಿತ್ಸೆ ಮುಂದುವರೆಸಿದ್ದಾರೆ. 


Leave a Comment