ಮಂಗಳೂರು :ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ಸಮುದ್ರಕ್ಕಿಳಿದ ಘಟನೆ ಇಲ್ಲಿನ ನವಮಂಗಳೂರು ಬಂದರಿನಲ್ಲಿ ನಡೆದಿದ್ದು, ಚಾಲಕ ಸಾವನ್ನಪ್ಪಿದ್ದು ಇನ್ನೋರ್ವ ಕಣ್ಮರೆಯಾಗಿದ್ದಾರೆ.
ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಡೆಲ್ಟಾ ಕಂಪೆನಿಗೆ ಸೇರಿದ ಭಾರತ್ ಬೆಂಝ್ 10 ಚಕ್ರದ ಕಂಟೈನರ್ ಲಾರಿ ನವ ಮಂಗಳೂರು ಬಂದರಿನ 14 ನೇ
ಬರ್ತ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದೆ.
ಘಟನೆಯಲ್ಲಿ ಚಾಲಕ ರಾಜೇಸಾಬ (22) ಮೃತಪಟ್ಟಿದ್ದು, ಲಾರಿಯಲ್ಲಿದ್ದ ಇನ್ನೋರ್ವ ಸಹಚಾಲಕ ಭೀಮಪ್ಪ (25) ಕಣ್ಮರೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ.














