ತಿರುವನಂತಪುರಂ : ಮದ್ಯ ಪ್ರಿಯರಿಗೆ ಸಂತಸದ ಸುದ್ದಿ ಕೊಟ್ಟ ಕೇರಳ ಸರಕಾರ ತಾ 17 ರಿಂದ BevQ ಮೊಬೈಲ್ ಆ್ಯಪ್ ಮೂಲಕ ಮದ್ಯ ಖರೀದಿಸಬಹುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದರು.
ಕೇರಳದಲ್ಲಿ ಪ್ರಸ್ತುತ ಕೊರೊನವು ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸರಕಾರವು ಕೊರೊನ ನಿಯಂತ್ರಣಕ್ಕಾಗಿ ನಾಲ್ಕು ವಿಭಾಗಗಳಾಗಿ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ.ಟಿಪಿಆರ್ 8% ಕ್ಕಿಂತ ಕಡಿಮೆ ಇರುವಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಬಹುದು. 8-20% ವರೆಗೆ ಟಿಪಿಆರ್ ಇದ್ದಲ್ಲಿ ಪ್ರತಿದಿನ ಅನುಕೂಲಕರ ಮಳಿಗೆಗಳನ್ನು ತೆರೆಯಬಹುದು
ಹಾಗೂ ಇತರ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ.ಟಿಪಿಆರ್ 20 - 30% ಸ್ಥಳಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಅನುಕೂಲಕರ ಮಳಿಗೆಗಳು ಹೊರತುಪಡಿಸಿ . 30% ಕ್ಕಿಂತ ಹೆಚ್ಚಿನ ಟಿಪಿಆರ್ ಇರುವ ಸ್ಥಳಗಳಲ್ಲಿ ಟ್ರಿಪಲ್ ಲಾಕ್‌ಡೌನ್ ಎಂದು ಸರಕಾರ ತಿಳಿಸಿದೆ.














