ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ (ಜೂ.15) ಮಾಹಿತಿ ನೀಡಿದೆ.
ಇನ್ನು ಕೋವಿಡ್ ಲಸಿಕೆ ಪಡೆಯಲು 18 ವರ್ಷ ಮೇಲ್ಪಟ್ಟವರೂ ಕೂಡ ವಾಕ್ ಇನ್ ಮೂಲಕ ಅಂದರೆ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಬಹುದು. ಅಲ್ಲಿ ದಾಖಲೆ ಸಲ್ಲಿಸಿ ಲಸಿಕೆ ಪಡೆದುಕೊಳ್ಳಬಹುದು.
ಕೊವಿನ್ ಪೋರ್ಟಲ್ ಮೂಲಕ
ರಿಜಿಸ್ಟ್ರೇಷನ್ ನಡೆಸಿ ಲಸಿಕೆ ಪಡೆದುಕೊಳ್ಳುವುದು ಕೂಡ ಒಂದು ಮಾರ್ಗವಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಗ್ರಾಮೀಣ ಭಾಗದ ಜನರು ನೋಂದಾವಣೆ ಮಾಡಿ ಲಸಿಕೆ ಪಡೆದುಕೊಳ್ಳಲು ಕಷ್ಟ ಅನುಭವಿಸುತ್ತಿದ್ದಾರೆ ಹೀಗಾಗಿ ಬುಕಿಂಗ್ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.














