Coastal Bulletin

ಹುಬ್ಬಳ್ಳಿ, ಜೂ 15 : ಕೇರಳದಿಂದ ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಆಗಮಿಸಿದ ಇಂಡಿಗೋ ವಿಮಾನ ಲ್ಯಾಂಡ್‌ ಆಗುವ ಸಂದರ್ಭ ವಿಮಾನದ ಟೈಯರ್‌‌ ಸ್ಪೋಟಗೊಂಡು ಪವಾಡಸದೃಶ್ಯವಾಗಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಪಾರಾದ ಘಟನೆ ವರದಿಯಾಗಿದೆ.

ಇಂಡಿಗೊ ಫ್ಲೈಟ್ 6 ಇ -7979 ಎಟಿಆರ್‌, ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿ ಗೆ ಸೋಮವಾರ ಸಂಜೆ  ಬರುವ ಸಂದರ್ಭ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ ಟೈಯರ್‌ ಸ್ಪೋಟಗೊಂಡಿದೆ. ಟೈರ್ ಸ್ಪೋಟವಾಗಿ

ವಿಮಾನ ನಿಲ್ದಾಣದ ರನ್ ವೇ ನಲ್ಲಿ   ಡಾಮರು ಕಿತ್ತು ಬಂದಿದೆ.ವಿಮಾನ ವೇಗ ಕಡಿಮೆ ಇದ್ದ ಕಾರಣ ಯಾವೂದೇ ಅಪಾಯ ಸಂಭವಿಸಲಿಲ್ಲ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.

ಪ್ರಸ್ತುತ ವಿಮಾನವು ಹುಬ್ಬಳಿಯಲ್ಲಿ ಪರಿಶೀಲನೆಯಲ್ಲಿದೆ.

Leave a Comment