ಮಂಗಳೂರು: ನಗರದಿಂದ ಬಜ್ಪೆ ಅಂ.ರಾ.ವಿಮಾನ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಮರವೂರಿನಲ್ಲಿ ಇರುವ ಪ್ರಮುಖ ಸೇತುವೆ ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ.
ಬಜ್ಪೆ ವಿಮಾನ ನಿಲ್ದಾಣಕ್ಕೆ ಪ್ರಮುಖ ಕೊಂಡಿಯಾಗಿರುವ ಮರವೂರು ಸೇತುವೆ ಬಿರುಕು ಗೊಂಡ ಪರಿಣಾಮವಾಗಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ,ಏರ್ಪೋರ್ಟ್ಗೆ ಹೋಗುವವರು ಬದಲಿ ರಸ್ತೆ ಕಾವೂರು ಕೂಳೂರು, ಕೆ ಬಿ ಎಸ್ ಜೋಕಟ್ಟೆ, ಪೋರ್ಕೊಡಿ,ಬಜಪೆ. ಅಥವಾ ಪಚ್ಚನಾಡಿ, ವಾಮಂಜೂರ್, ಗುರುಪುರ ಕೈಕಂಬ, ಮೂಲಕ ಬಜ್ಪೆ ಗೆ ತೆರಳಬಹುದಾಗಿದೆ. ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಆಗಮಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.