ಕಾಸರಗೋಡು ಬ್ಯಾಂಕ್ ಮ್ಯಾನೇಜರ್, ಪತ್ನಿ ಹಾಗೂ ಮಕ್ಕಳ ಮೃತದೇಹ ಮನೆಯಲ್ಲಿ ಪತ್ತೆ

Coastal Bulletin
ಕಾಸರಗೋಡು ಬ್ಯಾಂಕ್ ಮ್ಯಾನೇಜರ್, ಪತ್ನಿ ಹಾಗೂ ಮಕ್ಕಳ ಮೃತದೇಹ ಮನೆಯಲ್ಲಿ ಪತ್ತೆ

ಬ್ಯಾಂಕ್ ಮ್ಯಾನೇಜರ್, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮ್ಯಾನೇಜರ್ ಶೀನಾ (35), ಅವರ ಪತಿ ಸಬೀಶ್(37), ಮಕ್ಕಳಾದ ಹರಿಗೋವಿಂದ್ (6), ಮತ್ತು ಶ್ರೀವರ್ಧನ್ (2.5) ಎಂದು ಗುರುತಿಸಲಾಗಿದೆ.

ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಇವರು ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶೀನಾ ಕೆಲವು ದಿನಗಳ

ಹಿಂದೆಯಷ್ಟೇ ಕಾಸರಗೋಡು ಶಾಖೆಗೆ ವರ್ಗಾವಣೆಗೊಂಡಿದ್ದರು.

ಸಬೀಶ್ ಹಾಗೂ ಶೀನಾ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳ ಮೃತದೇಹ ಕೆಳಗೆ ನೆಲದಲ್ಲಿ ಪತ್ತೆಯಾಗಿದೆ. ಪೋಲಿಸರು ಸ್ಥಳಕ್ಕಾಗಮಿಸಿ ತನಿಖೆ ಮುಂದುವರೆಸಿದ್ದಾರೆ. 


Leave a Comment