ಕಾಸರಗೋಡು: ಯುವತಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿದ್ದಕ್ಕೆ ಚೂರಿಯಿಂದ ಇರಿದು ಯುವಕನನ್ನು ಕೂಲೆ ಮಾಡಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಪೆರ್ಲ ಕಜಂಪಾಡಿಯ ಪವನ್ ರಾಜ್ ಎಂಬಾತ ಮಧೂರು ಅರಂತೋಡಿನ ಸಂದೀಪ್ ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.
ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್‌ರನ್ನು ಪರಿಯಾರಂ
ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನದ ವೇಳೆ ಮೃತಪಟ್ಟಿದ್ದಾರೆ.
ಇದೀಗ ಆರೋಪಿಯ ಪತ್ತೆ ಬದಿಯಡ್ಕ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.















